ಬಿಜೆಪಿ ಯುವ ಮೋರ್ಚಾ ರಾಷ್ಟೀಯ ಉಪಾಧ್ಯಕ್ಷರಾದ ಮಧುಕೇಶ್ವರ ದೇಸಾಯಿಯವರು ಏ. 24ರಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದರು. ಯುವ ಮೋರ್ಚಾ ಸುಳ್ಯ ಮಂಡಲದ ವತಿಯಿಂದ ಅವರನ್ನು ಬರಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಯುವ ಮೋರ್ಚಾ ಸುಳ್ಯ ಮಂಡಲದ ಅಧ್ಯಕ್ಷರಾದ ಶ್ರೀಕೃಷ್ಣ ಎಂ.ಆರ್, ಪ್ರಧಾನ ಕಾರ್ಯದರ್ಶಿ ಮನುದೇವ್ ಪರಮಲೆ, ಉಪಾಧ್ಯಕ್ಷ ಉಮೇಶ್ ಗೌಡ ಉಪಸ್ಥಿತರಿದ್ದರು.