ಏ. 22ರಂದು ಸುರಿದ ಗಾಳಿ ಮಳೆಗೆ ಬಳ್ಪ ಗ್ರಾಮದ ಎಣ್ಣೆಮಜಲು ಬಳಿ ಅಪಾರ ಹಾನಿ ಸಂಭವಿಸಿದೆ.
ಚಂದ್ರಶೇಖರ ಗೌಡ ಎಂಬವರ ಮನೆಗೆ ಹಾನಿಯಾಗಿದ್ದು, ಹತ್ತಾರು ಅಡಿಕೆ ಮರಗಳು ಮುರಿದು ಬಿದ್ದಿರುವುದಾಗಿ ತಿಳಿಸಿದ್ದಾರೆ.
ಭಾಸ್ಕರ ಗೌಡ ಪಂಡಿಯವರ ಕೊಟ್ಟಿಗೆಯ ಶೀಟ್ ಹಾರಿ ಹೋಗಿ ಹಾನಿಯಾಗಿದೆ. ಆ ಭಾಗದಲ್ಲಿ ಬೃಹತ್ ಗಾತ್ರದ ಮರಗಳೂ ಧರಾಶಾಯಿಯಾಗಿರುವುದಾಗಿ ತಿಳಿದುಬಂದಿದೆ.