ಸಾಧಕರೊಂದಿಗೆ ಸಂವಾದ, ಹಾಗೂ “ಮುಖ್ಯಮಂತ್ರಿ” ನಾಟಕ ಪ್ರದರ್ಶನ
ಕಳಂಜ ಗ್ರಾಮದ ತಂಟೆಪ್ಪಾಡಿ ನಿನಾದ ಸಾಂಸ್ಕೃತಿಕ ಕೇಂದ್ರದಲ್ಲಿ “ಸಾಧನೆಯ ಸಂಭ್ರಮ”, ಸಾಧಕರೊಂದಿಗೆ ಸಂವಾದ, ಸಾಧಕರಿಗೆ ಸನ್ಮಾನ ಹಾಗೂ “ಮುಖ್ಯಮಂತ್ರಿ” ನಾಟಕ ಪ್ರದರ್ಶನ ಏ.24 ಆದಿತ್ಯವಾರದಂದು ಜರುಗಿತು. ಸಾಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಜನಪ್ರಿಯ ಚಲನಚಿತ್ರ, ಧಾರಾವಾಹಿ ಮತ್ತು ರಂಗಭೂಮಿ ನಟರಾದ ಶ್ರೀ ಮುಖ್ಯಮಂತ್ರಿ ಚಂದ್ರು ಹಾಗೂ ಡಾ.ಬಿ.ವಿ.ರಾಜಾರಾಂ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಸಾಧಕರ ಸನ್ಮಾನದ ಅಂಗವಾಗಿ ಏಕಲವ್ಯ ಪ್ರಶಸ್ತಿ ಪುರಸ್ಕೃತ ರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ಶ್ರೀ ಪ್ರಶಾಂತ್ ರೈ ಕೈಕಾರ, ಕರ್ನಾಟಕ ಯಕ್ಷರಂಗಾಯಣ ಕಾರ್ಕಳ ಇದರ ನಿರ್ದೇಶಕರಾದ ಶ್ರೀ ಜೀವನ್ ರಾಂ ಸುಳ್ಯ ಹಾಗೂ ಯೋಗಾಸನದಲ್ಲಿ ರಾಷ್ಟ್ರೀಯ ದಾಖಲೆಗೈದ ಶ್ರೀ ಮೋನಿಷ್ ತಂಟೆಪ್ಪಾಡಿ ಇವರುಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಗೌರವ ಉಪಸ್ಥಿತಿಯಲ್ಲಿ ಮಾಜಿ ವಿಧಾನಪರಿಷತ್ ಸದಸ್ಯರಾದ ಶ್ರೀ ಅಣ್ಣಾ ವಿನಯಚಂದ್ರ ಕಿಲಂಗೋಡಿ, ಕಳಂಜ ಗ್ರಾ.ಪಂ.ಅಧ್ಯಕ್ಷ ಶ್ರೀ ಪ್ರಶಾಂತ್ ಕುಮಾರ್ ಕಿಲಂಗೋಡಿ, ಬಾಳಿಲ ಗ್ರಾ.ಪಂ.ಅಧ್ಯಕ್ಷೆ ಶ್ರೀಮತಿ ಸವಿತಾ ಗುರುರಾಜ್ ಚಾಕೋಟೆಡ್ಕ, ಕಳಂಜ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶ್ರೀ ಶ್ರೀಧರ್.ಕೆ.ಆರ್, ನಿನಾದ ಸಾಂಸ್ಕೃತಿಕ ಕೇಂದ್ರದ ಐತ್ತಪ್ಪ ಶೆಟ್ಟಿ ತಂಟೆಪ್ಪಾಡಿ ಇದ್ದರು. ಕಾರ್ಯಕ್ರಮವನ್ನು ರಂಗಕರ್ಮಿ, ಸಾಂಸ್ಕೃತಿಕ ಸಂಘಟಕರಾದ ಶ್ರೀ ಶ್ರೀನಿವಾಸ.ಜಿ ಕಪ್ಪಣ್ಣ ರವರು ಸಂಯೋಜಿಸಿದರು. ನಿನಾದ ಸಾಂಸ್ಕೃತಿಕ ಕೇಂದ್ರದ ಸಂಚಾಲಕ ವಸಂತ ಶೆಟ್ಟಿ ಬೆಳ್ಳಾರೆ ಸ್ವಾಗತಿಸಿದರು. ಬಳಿಕ ಕರ್ನಾಟಕ ಹವ್ಯಾಸಿ ರಂಗಭೂಮಿಯ ಮಹತ್ತರ ದಾಖಲೆಯ ‘ಕಲಾಗಂಗೋತ್ರಿ’ ಅಭಿನಯಿಸುವ, ಡಾ.ಬಿ.ವಿ.ರಾಜಾರಾಂ ನಿರ್ದೇಶಿಸಿದ, “ಮುಖ್ಯಮಂತ್ರಿ” ನಾಟಕ 781 ನೇ ಪ್ರದರ್ಶನ ನಡೆಯಿತು. ನೂರಾರು ಸಂಖ್ಯೆಯ ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ನಾಟಕ ವೀಕ್ಷಿಸಿದರು.