Breaking News

ಪಂಜದಲ್ಲಿ ಭಜನಾ ತರಬೇತಿ ಶಿಬಿರ ಉದ್ಘಾಟನೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 ಭಜನೆಯಿಂದ ಬದುಕಿನ ಶಿಕ್ಷಣ : ಪ್ರವೀಣ್ ಕುಮಾರ್

“ಮಕ್ಕಳಿಗೆ ಕೇವಲ ಅಂಕ ಪಡೆಯುವ ಪಠ್ಯ ಶಿಕ್ಷಣ ನೀಡಿದರೆ ಸಾಕಾಗದು. ಜೊತೆಗೆ ಸಂಸ್ಕೃತಿ ಆಚಾರ-ವಿಚಾರ ಉಳಿಸಿ ಕೊಳ್ಳುವ ಸಂಸ್ಕಾರಯುತ ಜೀವನ‌‌ ನಡೆಸುವ ಶಿಕ್ಷಣ ನೀಡ ಬೇಕು. ಅದಕ್ಕೆ ಭಜನೆ ಪೂರಕವಾಗುತ್ತದೆ. ಭಜನೆಯಿಂದ ಭಗವಂತನನ್ನು ಹತ್ತರದಿಂದ ಕಾಣಲು ಸಾಧ್ಯ.ಸಾಮೂಹಿಕ ಪೂಜೆ, ಪ್ರಾರ್ಥನೆ, ಭಜನೆಯಿಂದ ಭಗವಂತನ ವಿಶೇಷ ಶಕ್ತಿ ಪ್ರಾಪ್ತಿಯಾಗುತ್ತದೆ.ಆ ಮೂಲಕ ಮನ, ಮನೆ ,ಊರು ಬೆಳಗುವುದು.ಎಂದು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದ.ಕ.-2 ಪುತ್ತೂರು ನಿರ್ದೇಶಕ ಪ್ರವೀಣ್ ಕುಮಾರ್ ರವರು ಹೇಳಿದರು.
ಅವರು ಎ.25 ರಂದು
ಶ್ರೀ ಶಾರದಾಂಬ ಭಜನಾ ಮಂಡಳಿ ಪಂಜ,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಸುಳ್ಯ ತಾಲೂಕು ಪಂಜ ವಲಯ, ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್ ಸುಳ್ಯ ತಾಲೂಕು ಇವರ ವತಿಯಿಂದ ಎ.25 ರಂದು ಪಂಜ ಶ್ರೀ ಶಾರದಾಂಬ ಭಜನಾ ಮಂದಿರದಲ್ಲಿ ಜರುಗಿದ
13ನೇ ವರ್ಷದ ಭಜನಾ ತರಬೇತಿ ಉದ್ಘಾಟಿಸಿ ಮಾತನಾಡಿದರು.

“ಭಜನೆ ಜೊತೆಗೆ ನಮ್ಮ ಪವಿತ್ರವಾದ ಗ್ರಂಥದ ವಿಚಾರಗಳನ್ನು ನಮ್ಮ ಮಕ್ಕಳಿಗೆ ಬೋಧನೆ ಮಾಡುವ ಅವಶ್ಯಕತೆ ಇದೆ.” ಎಂದು ಅವರು ಹೇಳಿದರು.
ಭಜನೋತ್ಸವ ಸಮಿತಿ ಅಧ್ಯಕ್ಷ ಪ್ರಕಾಶ್ ಜಾಕೆ ಸಭಾಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿ
ಸುಳ್ಯ ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ ರವರು ಮಾತನಾಡಿ
“ಪೂಜ್ಯ ಖಾವಂದರ ಕಲ್ಪನೆ ಇದೇ ಆಗಿತ್ತು. ಎಲ್ಲೆಡೆ ಭಜನಾ ಕ್ರಾಂತಿಯಾಗ ಬೇಕು ಎಂಬುದು . ಅದು ಇವತ್ತು ಸಾಕಾರ ಗೊಳ್ಳುತ್ತಿರವುದು ಅತ್ಯಂತ ಸಂತೋಷದ ವಿಚಾರ. ಮಕ್ಕಳ ಮನಸುಗಳನ್ನು ಹತೋಟಿಯಲ್ಲಿರಿಸಲು, ಮನೆಮನೆಗಳಲ್ಲಿ ಭಜನೆ ವ್ಯಾಪಿಸಲು ಭಜನಾ ತರಬೇತಿ ಶಿಬಿರ ಪೂರಕವಾಗುತ್ತದೆ”.ಎಂದು ಹೇಳಿದರು.ಮುಖ್ಯ ಅತಿಥಿಗಳಾಗಿ
ವನಿತಾ ಸಮಾಜದ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಡಿ ಪ್ರಸಾದ್, ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ,ಸುಳ್ಯ ವಲಯದ ಶ್ರೀ ಕ್ಷೇತ್ರ ಭಜನಾ ಪರಿಷತ್ ಪೂರ್ವಾಧ್ಯಕ್ಷ ವಿಶ್ವನಾಥ ರೈ ಅರ್ಗುಡಿ , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯ ಪಂಜ ವಲಯ ಅಧ್ಯಕ್ಷ ಮೋನಪ್ಪ ಗೌಡ ಬೊಳ್ಳಾಜೆ , ವಿಪತ್ತು ನಿರ್ವಹಣಾ ಘಟಕ ಪಂಜ ವಲಯ ಸಂಯೋಜಕ ವಿಶ್ವನಾಥ ಸಂಪ, ಹಾಗೂ ರಾಜ್ಯ ಭಜನಾ ಪರಿಷತ್ ಅಧ್ಯಕ್ಷ , ಶ್ರೀ ಶಾರದಾಂಬಾ ಭಜನಾ ಮಂಡಳಿಯ ಅಧ್ಯಕ್ಷ ಬಾಲಕೃಷ್ಣ ಪುತ್ಯ, ಭಜನಾ ಮಂಡಳಿಯ ಜೊತೆ ಕಾರ್ಯದರ್ಶಿ ರಾಜಕುಮಾರ್ ಬೇರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ವೇಳೆ ಭಜನಾ ಕೈಪಿಡಿ ಬಿಡುಗಡೆ ಗೊಳಿಸಲಾಯಿತು. ಕಾರ್ಯಕ್ರಮದಲ್ಲಿ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ.ಟ್ರಸ್ಟ್ ಪಂಜ ವಲಯ,ವಲಯ ಮೇಲ್ವಿಚಾರಕಿ ಶ್ರೀಮತಿ ಉಷಾ ಕಲ್ಯಾಣಿ ಕೆ ಸ್ವಾಗತಿಸಿದರು. ಭಜನಾ ಮಂಡಳಿ ಖಜಾಂಜಿ ಲೋಕೇಶ್ ಬರೆಮೇಲು ಪ್ರಾಸ್ತಾವಿಕ ಗೈದರು. ಸೇವಾ ಪ್ರತಿನಿಧಿ ಶ್ರೀಮತಿ ರೋಹಿಣಿ ಆರ್ನೋಜಿ ವಂದಿಸಿದರು ‌ಎ.29 ರಂದು ಸಮಾರೋಪ ಸಮಾರಂಭ ಜರುಗಲಿದೆ.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.