ಎ.26ರಂದು ಉಳ್ಳಾಕುಲು ದೈವದ ಅಡ್ಡಣ ಪೆಟ್ಟು
ಮಂಡೆಕೋಲು ಗ್ರಾಮದ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ನಡೆಯುತ್ತಿದ್ದು, ಎ.೨೫ರಂದು ಬೆಳಗ್ಗೆ ದೇವರ ದರ್ಶನ ಬಲಿ ಉತ್ಸವ, ಬಳಿಕ ರಾಜಾಂಗಣ ಪ್ರಸಾದ, ಮಂತ್ರಾಕ್ಷತೆ ನಡೆಯಿತು. ಸಂಜೆ ಭಜನಾ ಕಾರ್ಯಕ್ರಮ, ದುರ್ಗಾಪೂಜೆ ನಡೆಯುವುದು.
ಎ.೨೬ರಂದು ಪೂರ್ವಾಹ್ನ ಶ್ರೀ ಉಳ್ಳಾಕುಲು ಮತ್ತು ಪರಿವಾರ ದೈವಗಳ ನೇಮೋತ್ಸವ ಬಳಿಕ ಉಳ್ಳಾಕುಲು ದೈವದ ಅಡ್ಡಣ ಪೆಟ್ಟು ನಂತರ ಸಿರಿಮುಡಿ ಪ್ರಸಾದ ವಿತರಣೆ ನಡೆಯುವುದು. ಬಳಿಕ ಉದ್ರಾಂಡಿ ಹಾಗೂ ಉಪದೈವಗಳ ಕೋಲ, ಅಪರಾಹ್ನ ಶ್ರೀ ಉಳ್ಳಾಕುಲು ಮೂಲಸ್ಥಾನ ಕಳೇರಿಗೆ ಭಂಡಾರ ಹಿಂತಿರುಗುವುದು.
ಎ.೧೫ರಂದು ಜಾತ್ರೋತ್ಸವದ ಗೊನೆ ಮುಹೂರ್ತ ನಡೆಯಿತು. ಎ.೨೩ರಂದು ಸಂಜೆ ಉಗ್ರಾಣ ತುಂಬಿಸಲಾಯಿತು. ರಾತ್ರಿ ಶ್ರೀ ಸತ್ಯನಾರಾಯಣ ದೇವರ ಪೂಜೆ ನಡೆಯಿತು. ಎ.೨೪ರಂದು ಪೂರ್ವಾಹ್ನ ನವಕ, ಗಣಪತಿ ಹವನ, ಹರಕೆಯ ತುಲಾಭಾರ ಮಹಾಪೂಜೆ ನಂತರ ಸಮಾರಾಧನೆ ನಡೆಯಿತು. ಅಪರಾಃ ಶ್ರೀ ಉಳ್ಳಾಕುಲು ಮೂಲಸ್ಥಾನ ಕಳೇರಿಯಿಂದ ಭಂಡಾರ ತರಲಾಯಿತು. ರಾತ್ರಿ ಭೂತ ಬಲಿ ಉತ್ಸವ, ಬಲಿಕಟ್ಟೆ ಪೂಜೆ, ವಸಂತೋತ್ಸವ, ಬೆಡಿ ಉತ್ಸವ ಹಾಗೂ ನೃತ್ಯ ಬಲಿ ಉತ್ಸವ ನಡೆಯಿತು. ಜಾತ್ರೋತ್ಸವ ಪ್ರಯುಕ್ತ ಪ್ರತಿ ದಿನ ಅನ್ನದಾನ ನಡೆಯುತ್ತಿದೆ.