ಐವರ್ನಾಡು ಗ್ರಾಮದ ಕೊಯಿಲ ಮೂವತ್ತು ಒಕ್ಕಲಿಗೆ ಸಂಬಂಧಿಸಿದ ಶ್ರೀ ಉಳ್ಳಾಕುಲು ದೈವ,ನಾಯರ್ ದೈವದ ನೇಮೋತ್ಸವವು ಎ.25 ರಂದು ನಡೆಯಿತು.
ಬೆಳಿಗ್ಗೆ ದೊಡ್ಡಮನೆ ಮಾಳ್ಯದಿಂದ ಭಂಡಾರ ತರಲಾಯಿತು.
ನಂತರ ಶ್ರೀ ಉಳ್ಳಾಕುಲು ದೈವದ ನೇಮ,ನಾಯರ್ ದೈವದ ,ಪುರುಷ ದೈವದ ನೇಮ ಹಾಗೂ ಪರಿವಾರ ದೈವಗಳ ನೇಮೋತ್ಸವ ನಡೆಯಿತು.
ನಂತರ ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಮಡ್ತಿಲ ಕುಟುಂಬದ ಆಡಳಿತದಾರ ಮಡ್ತಿಲ ಬೆಳ್ಯಪ್ಪ ಗೌಡ, ಕಾರ್ಯನಿರ್ವಾಹಕ ದಿನೇಶ್ ಮಡ್ತಿಲ ಹಾಗೂ ಮಡ್ತಿಲ ಕುಟುಂಬಸ್ಥರು ,ಊರ ಹತ್ತು ಸಮಸ್ತರು ಉಪಸ್ಥಿತರಿದ್ದರು.
ರಾತ್ರಿ ರಕ್ತೇಶ್ವರಿ,ಪಂಜುರ್ಲಿ,ಕಲ್ಕುಡ,ಕಲ್ಲುರ್ಟಿ,ಗುಳಿಗ ದೈವಗಳ ನೇಮ ನಡಾವಳಿ ನಡೆಯಲಿದೆ.