ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಸರ್ಕಾರದಿಂದ ಬಂದ ಒಂದು ಕೋಟಿಯಲ್ಲಿ ಒಂದು ಕೋಟಿ ಕೂಡ ಕೃಷಿಕನ ಕೈ ಸೇರುತ್ತದೆ : ಶಶಿಕುಮಾರ್ ರೈ ಬಾಲ್ಯೊಟ್ಟು
ಕೊಲ್ಲಮೊಗ್ರು – ಹರಿಹರ ಪ್ರಾ. ಕೃ.ಪ.ಸ.ಸಂಘದ
ಕೊಲ್ಲಮೊಗ್ರು ಶಾಖೆಯ ನೂತನ ಗೋದಾಮು ಕಟ್ಟಡದ ಉದ್ಘಾಟನೆ, ಸಭಾ ಕಾರ್ಯಕ್ರಮ, ಸನ್ಮಾನ ಇಂದು ನಡೆಯಿತು.
ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೋಟ್ಟು
ಗೊದಾಮು ಕಟ್ಟಡವನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಸರ್ಕಾರದಿಂದ ಬಂದ ಒಂದು ಕೋಟಿಯಲ್ಲಿ ಒಂದು ಕೋಟಿ ಕೂಡ ಕೃಷಿಕನ ಕೈ ಸೇರುತ್ತದೆ. ಇದು ಕೃಷಿ ಪತ್ತಿನ ಸಹಕಾರಿ ಸಂಘದ ಮಹತ್ವ ಎಂದರು. ಹಳ್ಳಿಗಾಡಿನ ಈ ಸಂಸ್ಥೆ ಅದ್ಬುತವಾಗಿ ಬೆಳೆಯುತ್ತಿದೆ. ಇಲ್ಲಿನ ಗೋದಾಮು ಕಟ್ಟಡದ ಖರ್ಚಿನ ಭಾಗವನ್ನು ಡಿ ಸಿ ಸಿ ಬ್ಯಾಂಕ್ ಅಧ್ಯಕ್ಷರಲ್ಲಿ ಮಾತನಾಡಿ ತೆಗೆಸಿಕೊಡಲು ಬದ್ದನಾಗಿರುವುದಾಗಿ ತಿಳಿಸಿದರು.
ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಸುಕನ್ಯ ನಾಮ ಫಲಕ ಅನಾವರಣ ಮಾಡಿದರು. ಆ ಬಳಿಕ
ಶ್ರೀ ಮಯೂರ ಕಲಾ ಮಂದಿರ , ಕೊಲ್ಲಮೊಗ್ರು ಇಲ್ಲಿ ಸಭಾ ಕಾರ್ಯಕ್ರಮ ನಡೆಯಿತು.
ಸಂಘದ ಅಧ್ಯಕ್ಷ ವಿನೂಪ್ ಮಲ್ಲಾರ
ಅಧ್ಯಕ್ಷತೆ ವಹಿಸಲಿದ್ದರು.
ವೇದಿಕೆಯಲ್ಲಿ ಹರಿಹರ ಪಲ್ಲತಡ್ಕದ ಮಂಡಲ ಪಂಚಾಯತ್ ನ ಮಾಜಿ ಪ್ರಧಾನ ಕೆ.ವಿ ಸುಧೀರ್ ಕೂಜುಗೋಡು ಕಟ್ಟೆಮನೆ, ಬ್ಯಾಂಕ್ ಆಫ್ ಬರೋಡಾ ನಿವೃತ್ತ ಮೆನೇಜರ್ ಶ್ರೀಮತಿ ಉಷಾ ಭವಾನಿಶಂಕರ ಪಿಂಡಿಮನೆ, ವೆಂಕಟ್ರಮಣ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯ ಅಧ್ಯಕ್ಷ ಪಿ ಸಿ ಜಯರಾಮ, ಕೊಲ್ಲಮೊಗ್ರು ಹರಿಹರ ಸೊಸೈಟಿಯ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಹರ್ಷಕುಮಾರ್ ಡಿ ಯಸ್, ಸೊಸೈಟಿಯ ನಿವೃತ್ತ ಕಾರ್ಯನಿರ್ವಹಣಾಧಿಕಾರಿ ನಾರಾಯಣ ಪುಳಿಕುಕ್ಕು, ದಾಮೋದರ ಕೆ. ಎಸ್ ಸೊಸೈಟಿಯ, ಸೊಸೈಟಿಯ ಮಾಜಿ ಅಧ್ಯಕ್ಷ ಕೆ.ಪಿ. ಗಿರಿಧರ ಕಿರಿಭಾಗ , ಬಿ.ಆರ್ . ಉಮೇಶ್ ಬಿಳಿಮಲೆ , ಲೋಕಯ್ಯ ಗೌಡ ಕು.ಸಿ. ಕುಂಞೇಟಿ , ಎಂ.ಕೆ. ಶೇಷಪ್ಪ ಗೌಡ ಮಣಿಯಾನ ಮನೆ ,ಕೆ ವಿ ಜಿ ಅ ಪ್ರೌಢಶಾಲಾ ಸಂಚಾಲಕ ಕಮಲಾಕ್ಷ ಮುಳುಬಾಗಿಲು, ಸೊಸೈಟಿಯ ಮಾಜಿ ನಿರ್ದೇಶಕಿ ಶ್ರೀಮತಿ ಉಷಾ ಪ್ರಭಾಕರ , ಪ್ರಗತಿಪರ ಕೃಷಿಕರಾದ ಕೆ.ಯಸ್ . ಸದಾಶಿವಯ್ಯ ಪನ್ನೆ , ಕೆ.ಪಿ. ಚಂದ್ರಶೇಖರ ಕೊಪ್ಪಡ್ಕ , ಕೆ.ಎಂ , ಜಕ್ರಿಯಾ ಚಾಂತಾಳ, ದ.ಕ.ಜಿ.ಕೇ.ಸ.ಬ್ಯಾಂಕ್ ಗುತ್ತಿಗಾರು ವಲಯ ಮೇಲ್ವಿಚಾರಕ ಮನೋಜ್ ಕುಮಾರ್ ಎಂ.ಪಿ ,
ಸಂಘದ ಉಪಾಧ್ಯಕ್ಷ ಮಣಿಕಂಠ ಕೊಳಗೆ,
ಆಡಳಿತ ಮಂಡಳಿ ನಿರ್ದೇಶಕರುಗಳಾದ ಹರ್ಷಕುಮಾರ್ ದೇವಜನ, ಎ ಎಂ ಶೇಖರ ಅಂಬೆಕಲ್ಲು, ಕೆ ಯಸ್ ಗಿರೀಶ್ ಕಟ್ಟೆಮನೆ, ಶ್ರೀಮತಿ ವಿಜಯ ಕೆ ಜೆ ಕೂಜುಗೋಡು, ಶ್ರೀಮತಿ ವಿಜಯ ಕೆ ಯಸ್ ಕಜ್ಜೋಡಿ, ಕೆ ಸುರೇಶ ಚಾಳೆಪ್ಪಾಡಿ, ರಾಜೇಶ್ ಪಿ ಯಸ್ ಪರಮಲೆ, ಕೆ ಮೋನಪ್ಪ ಕೊಳಗೆ, ಬೊಳಿಯ ಬೆಂಡೋಡಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಷಪ್ಪ ಗೌಡ ಕೆ, ಉಪಾಧ್ಯಕ್ಷ ಮಣಿಕಂಠ ಕೊಳಗೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಚಂದ್ರಕಲಾ ಪ್ರಾರ್ಥಿಸಿ, ಹರ್ಷಕುಮಾರ್ ದೇವಜನ ಸ್ವಾಗತಿಸಿದರು. ಎಂ ಎ ಶೇಖರ್ ಅಂಬೆಕಲ್ಲು ವಂದಿಸಿದರು. ನಿತ್ಯಾನಂದ ಭೀಮಗುಳಿ, ವಿದ್ಯಾ ಅಂಬೆಕಲ್ಲು ಕಾರ್ಯಕ್ರಮ ನಿರೂಪಿಸಿದರು.
ಸಾಧಕರಿಗೆ ಸನ್ಮಾನ
ವೈದ್ಯಕೀಯ ಸೇವೆಗಾಗಿ ಡಾ | ಚಂದ್ರಶೇಖರ ಕಿರಿಭಾಗ, ಸಂಘದ ಸ್ಥಳ ದಾನಿಗಳಾದ ಕಮಲಾಕ್ಷ ಮುಳುಬಾಗಿಲು, ಮಾಧ್ಯಮ ಕ್ಷೇತ್ರದ ಸಾಧನೆಗಾಗಿ ಕೊಡಲ್ಪಡುವ ಆರ್.ಎಲ್ . ವಾಸುದೇವರಾವ್ ‘ ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತರಾದ ಬಾಲಕೃಷ್ಣ ಭೀಮಗುಳಿ, ಸಾರ್ವಜನಿಕ ಸೇವೆಗಾಗಿ ಶಿವರಾಜ್ ಕಟ್ಟ, ಚಾರ್ಟಡ್ ಎಕೌಂಟೆಂಟ್ ಕು. ಕಾವ್ಯಶ್ರೀ ಕೆ.ವಿ. ಕೊಳಗೆ , ಕೆಎಸ್ಆರ್ಟಿಸಿ ಚಾಲಕರಾಗಿ ಜಿಲ್ಲಾ ಪುರಸ್ಕೃತರಾದ ಶ್ರೀಧರ ಕೆರೆಕ್ಕೋಡಿ ಅವರಿಗೆ, ಕಟ್ಟಡ ನಿರ್ವಹಣೆಗಾಗಿ ಡಿ . ಜನಾರ್ಧನ ಚಾಳೆಪ್ಪಾಡಿ, ಕಟ್ಟಡ ಕಂಟ್ರಾಕ್ಟರ್ ಬಿಜುರವರನ್ನು ಸನ್ಮಾನಿಸಲಾಯಿತು.
.