ಮುಂದಿನ ದಿನಗಳಲ್ಲಿ ಪ್ರತಿ ಪಂಚಾಯತ್ ಗೆ ಬಂದು ಕುಡಿಯುವ ನೀರಿನ ಯೋಜನೆ ಪರಿಶೀಲಿಸುತ್ತೇನೆ ಎಂದು ಸಚಿವ ಎಸ್.ಅಂಗಾರವರು ಹೇಳಿದರು. ಅವರು ಗುತ್ತಿಗಾರು ಗ್ರಾಮದ ಕಮಿಲದಲ್ಲಿ ನಡೆದ ಜಲಜೀವನ ಮಿಷಿನ್ ಯೋಜನೆಯ 16 ಗ್ರಾಮಗಳ ಕುಡಿಯುವ ನೀರಿನ ಯೋಜನೆಯನ್ನು ಸಾಂಕೇತಿಕವಾಗಿ ಉದ್ಘಾಟಿಸಿ ಮಾತನಾಡಿದರು.
ಗುತ್ತಿಗಾರು ಗ್ರಾ.ಪಂ ನಲ್ಲಿ ಸಭಾ ಕಾರ್ಯಕ್ರಮ ನಡೆದಿದ್ದು ಅಧ್ಯಕ್ಷತೆಯನ್ನು ಮೀನುಗಾರಿಕಾ, ಬಂದರು ಒಳನಾಡು ಜಲ ಸಾರಿಗೆ ಸಚಿವ ಎಸ್ ಅಂಗಾರ ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ಪ್ರತಿ ಗ್ರಾಮ ಮಟ್ಟದಲ್ಲಿ ಶುದ್ದ ಕುಡಿಯುವ ನೀರಿನ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ಆಯಾ ಪಂಚಾಯತ್ ನ ಗ್ರಾ. ಪಂ ನ ವಾರ್ಡ್ ಸದಸ್ಯರು ಜವಾಬ್ದಾರಿ ವಹಿಸಬೇಕು. ಹಲವು ಯೋಜನೆಗಳಿದ್ದರು ಕೆಲಸ ಮಾಡಿಲ್ಲ ಎನ್ನುವ ಬೈಗುಳ ಕಡಿಮೆ ಆಗಿಲ್ಲ. ಇಷ್ಟೆಲ್ಲಾ ಯೋಜನೆ ಇದ್ದರೂ ನಾವು ಯೋಜನೆ ಮುಟ್ಟಿಸುವ ಕೆಲಸ ಮಾಡಬೇಕು. ಜಲ ಜೀವನ್ ಯೋಜನೆಯು ಕುಡಿಯುವ ನೀರು ಮತ್ತು ವಿದ್ಯುತ್ ಸಂಪರ್ಕದ ಬೆಳಕು ಯೋಜನೆಯಂತ ಯೋಜನೆ ಇನ್ನು ಬರುವುದು ಕಷ್ಟ. ಎಲ್ಲಾ ಅಧ್ಯಕ್ಷರು ಸೇರಿ ಯೋಜನೆ ಸರಿಯಾಗಿ ಅನುಷ್ಠಾನ ಮಾಡಿ ಎಂದರು. ನನಗೀಗ ೫೮ ವರ್ಷ ಅದರಲ್ಲಿ ೩೮ ವರ್ಷಗಳಿಂದ ರಾಜಕೀಯದಲ್ಲಿದ್ದೇನೆ ಎಲ್ಲೆಲ್ಲಿ ಕೆಲಸ ಏನು ಮಾಡಬೇಕು ಎಂಬ ಸ್ಪಷ್ಟ ಅರಿವಿದೆ ಎಂದರು.
ವೇದಿಕೆಯಲ್ಲಿ ಗುತ್ತಿಗಾರು ಗ್ರಾ.ಪಂ ಅಧ್ಯಕ್ಷೆ ರೇವತಿ ಅಚ್ಚಳ್ಳಿ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್, ಗ್ರಾ.ಕು.ನೀರು ಮತ್ತು ನೈರ್ಮಲ್ಯ ಇಲಾಖೆ ಮಂಗಳೂರು ಇದರ ಕಾರ್ಯಪಾಲಕ ಅಭಿಯಂತರ ನರೇಂದ್ರ ಬಾಬು, ಗ್ರಾ.ಕು.ನೀರು ಮತ್ತು ನೈರ್ಮಲ್ಯ ಇಲಾಖೆ ಸುಳ್ಯ ಇದರ ಸಹಾಯಕ ಕಾರ್ಯಪಾಲಕ ಅಭಿಯಂತರ ಸುಂದರಯ್ಯ, ಗ್ರಂಥಾಲಯ ಸಮಿತಿಯ ಜಿಲಾ ಸದಸ್ಯ ಹರೀಶ್ ಕಂಜಿಪಿಲಿ, ಗ್ರಾ.ಪಂ ಅಧ್ಯಕ್ಷರುಗಳಾದ ಅಜ್ಜಾವರದ ಸತ್ಯವತಿ, ಅಮರ ಮೂಡ್ನೂರಿನ ಪದ್ಮಪ್ರಿಯಾ, ಬೆಳ್ಳಾರೆಯ ಚಂದ್ರಶೇಖರ ಪನ್ನೆ, ದೇವಚಳ್ಳದ ಸುಲೋಚನ ಡಿ, ಹರಿಹರ ಪಲ್ಲತಡ್ಕದ ಜಯಂತ ಬಾಳುಗೋಡು, ಜಾಲ್ಸೂರಿನ ಬಾಬು, ಕಳಂಜದ ಪ್ರಶಾಂತ್ ಕುಮಾರ್ ಕಿಲಂಗೋಡಿ, ಮಡಪ್ಪಾಡಿಯ ಮಿತ್ರದೇವ ಮಡಪ್ಪಾಡಿ, ಮುರುಳ್ಯದ ಕು? ಜಾನಕಿ ಶಾಂತಿನಗರ, ನೆಲ್ಲೂರು ಕೆಮ್ರಾಜೆಯ ಶೀಲಾವತಿ, ಪಂಜದ ಪೂರ್ಣಿಮಾ ವೈ, ಪೆರುವಾಜೆಯ ಜಗನ್ನಾಥ ಪೂಜಾರಿ, ಸಂಪಾಜೆಯ ಶಾಹುಲ್ ಹಮೀದ್ ಜಿ ಕೆ, ಉಬರಡ್ಕ ಮಿತ್ತೂರಿನ ಚಿತ್ರಕುಮಾರಿ, ಆಲೆಟ್ಟಿಯ ಪುಷ್ಪಾವತಿ ಉಪಸ್ಥಿತರಿದ್ದರು. ದಿವ್ಯಾ ಗುಡ್ಡೆಮನೆ ಪ್ರಾರ್ಥಸಿದರು.
ಭವಾನಿಶಂಕರ್ ಸ್ವಾಗತಿಸಿ, ಸಂದರಯ್ಯ ವಂದಿಸಿದರು. ಶಶಿಧರ ಮಾವಿನಕಟ್ಟೆ, ದಯಾನಂದ ಪತ್ತುಕುಂಜ ಕಾರ್ಯಕ್ರಮ ನಿರೂಪಿಸಿದರು.