ಪೇರಾಲು- ಅಂಬ್ರೋಟಿ ಶ್ರೀ ರಾಮ ಭಜನಾ ಮಂದಿರದ ಧಾರ್ಮಿಕ ಸಮಾರಂಭ
ಹಿಂದೂಗಳು ಧಾರ್ಮಿಕ ಭಾವನೆಯಿಂದ ಸಂಘಟಿತರಾದರೆ ಏನನ್ನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಈ ಪುಟ್ಟ ಊರಿನಲ್ಲಿ ತಲೆ ಎತ್ತಿದ ಈ ಭವ್ಯ ರಾಮಮಂದಿರವೇ ಸಾಕ್ಷಿ ಎಂದು ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಹೇಳಿದರು.
ಅವರು ಭಾನುವಾರ ಮಂಡೆಕೋಲು ಗ್ರಾಮದ ಪೇರಾಲು- ಅಂಬ್ರೋಟಿ ಶ್ರೀ ರಾಮ ಭಜನಾ ಮಂದಿರದ ಪುನರ್ನಿರ್ಮಾಣದ ಬಳಿಕ ನಡೆದ ಮೊದಲ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆರ್ಥಿಕ ವಾಗಿ ತೀರಾ ಹಿಂದುಳಿದಿದ್ದರೂ ಇಲ್ಲಿನ ಜನ ಧಾರ್ಮಿಕವಾಗಿ ಉನ್ನತ ಸ್ಥಾನದಲ್ಲಿದ್ದಾರೆ. ಈ ಊರಿಗೆ ಸರಕಾರದಿಂದ ಅಗತ್ಯ ಅನುದಾನವನ್ನು ಒದಗಿಸಲಾಗುವುದು ಎಂದವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನೂತನ ಮಂದಿರ ನಿರ್ಮಾಣಕ್ಕೆ ದೊಡ್ಡ ಮೊತ್ತದ ಧನಸಹಾಯ ಮಾಡಿದವರನ್ನು ಸಚಿವರು ಸನ್ಮಾನಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಂಡೆಕೋಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿನುತಾ ಪಾತಿಕಲ್ಲು, ಜಿ.ಪಂ. ಮಾಜಿ ಸದಸ್ಯೆ ಶ್ರೀಮತಿ ಪುಷ್ಪಾವತಿ ಬಾಳಿಲ, ತಾ.ಪಂ. ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ, ಬಜಪಿಲ ಉಳ್ಳಾಕುಲು ಕ್ಷೇತ್ರದ ಆಡಳಿತ ಮೊಕ್ತೇಸರ ಹೇಮಂತಕುಮಾರ್ ಗೌಡರಮನೆ, ಮಂಡೆಕೋಲು ಪ್ರಾ.ಕೃ. ಸಂಘದ ಅಧ್ಯಕ್ಷ ಪಿ.ಜಿ. ರಾಮಕೃಷ್ಣ ರೈ ಶುಭ ಹಾರೈಸಿದರು. ಮಂದಿರದ ಅಧ್ಯಕ್ಷ ವಾಸುದೇವ ಬತ್ಲಿಮನೆ, ಕಾರ್ಯದರ್ಶಿ ರಾಜಣ್ಣ ಪೇರಾಲುಮೂಲೆ, ಕೋಶಾಧಿಕಾರಿ ಜಯಪ್ರಕಾಶ್ ಕೊಡೆಂಚಿಕಾರ್, ಕೋಶಾಧಿಕಾರಿ ಭಾಸ್ಕರ ಮಿತ್ತಪೇರಾಲು, ಸಂಯೋಜಕ ಮನೋಜ್ ಕುಮಾರ್ ಅಡ್ಡಂತಡ್ಕ ಹಾಗೂ ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಉಪಸ್ಥಿತರಿದ್ದರು.ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಗಣೇಶ್ ನೀರ್ಪಾಡಿ ಸ್ವಾಗತಿಸಿ,ಕಾರ್ಯಾಧ್ಯಕ್ಷ ಜಯರಾಜ್ ಕುಕ್ಕೇಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಕುಶಾಲಪ್ಪ ಕೆಮ್ಮಾರ ವಂದಿಸಿದರು.
ನವನೀತ್ ರೈ ಮತ್ತು ದಾಮೋದರ ಮಿತ್ತಪೇರಾಲು ಕಾರ್ಯಕ್ರಮ ನಿರೂಪಿಸಿದರು.
ಧಾರ್ಮಿಕ ಕಾರ್ಯಕ್ರಮದ ನಂತರ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಮೇಳದವರಿಂದ ಸಂಪೂರ್ಣ ರಾಮಾಯಣ’ ಯಕ್ಷಗಾನ ಬಯಲಾಟ ನಡೆಯಿತು. ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ಜರಗಿತು.