ವ್ಯಕ್ತಿಗೆ ಸಂಸ್ಕಾರ ಲಭಿಸಿದಾಗ ವ್ಯಕ್ತಿತ್ವ ನಿರ್ಮಾಣವಾಗಿ ಭವ್ಯ ಭಾರತದ ನಿರ್ಮಾಣಕ್ಕೆ ನಾಂದಿಯಾಗಬಹುದು. ಕುಕ್ಕುಜಡ್ಕ ವಿಷ್ಣುನಗರದ ಹೆಸರು ಇತಿಹಾಸದ ಪುಟ ಸೇರುವಂತಾಗಲಿ.
ಸಂಕಲ್ಪ ಶಕ್ತಿಯಿಂದ ಸಂಘಟನಾತ್ಮಕವಾಗಿ ಸಾನಿಧ್ಯ ಬೆಳಗಿದೆ- ಒಡಿಯೂರು ಶ್ರೀ
ಕುಕ್ಕುಜಡ್ಕ ವಿಷ್ಣುನಗರ ಶ್ರೀ ವಿಷ್ಣುಮೂರ್ತಿ ಶ್ರೀ ರಕ್ತೇಶ್ವರೀ ಮತ್ತು ಪರಿವಾರ ದೈವಸ್ಥಾನದ ಒತ್ತೆಕೋಲ ಮಹೋತ್ಸವದಂದು ಧಾರ್ಮಿಕ ಸಭೆಯು ಎ.25 ರಂದು ನಡೆಯಿತು.
ದೈವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ರವರು ಅಧ್ಯಕ್ಷತೆ ವಹಿಸಿದ್ದರು.
ಒಡಿಯೂರು ಕ್ಷೇತ್ರದ ಶ್ರೀ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಯವರು ಆಶೀರ್ವಚನ ನೀಡಿದರು.
ಮಾಯಿಪಡ್ಕ ಮನೆತನದ ಆಚಾರ್ಯ ವೇ|ಮೂ| ಸಂದೇಶ ಭಟ್ಟ ಕಾಯಾರ ಧಾರ್ಮಿಕ ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳೂರು ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರ ನಾರಾಯಣ ಖಂಡಿಗೆ, ಕಂಹರ್ಪಣೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಎಸ್.ಅಶೋಕ್ ಕುಮಾರ್ ಕರಿಕ್ಕಳ,ಕುಕ್ಕೇಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯ.ಸ.ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ, ಕಡಬ ಪೋಲಿಸ್ ಠಾಣೆಯ ಉಪನಿರೀಕ್ಷಕ ಆಂಜನೇಯ ರೆಡ್ಡಿ, ದೈವಸ್ಥಾನದ ಆಡಳಿತ ಮಂಡಳಿಯ ವ್ಯವಸ್ಥಾಪಕ ಎಂ.ಜಿ.ಸತ್ಯನಾರಾಯಣ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿಷ್ಣುನಗರ ವಿಷ್ಣುಮೂರ್ತಿ ದೈವಸ್ಥಾನದ ಕುರಿತು ಹೊರತಂದ ಕಥನಗೀತೆ ಕನ್ನಡ ಆಲ್ಬಂ ವೀಡಿಯೋ ಧ್ವನಿಸುರುಳಿ ಬಿಡುಗಡೆ ಮಾಡಲಾಯಿತು.
ದೈವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡ ಸ್ವಯಂ ಸೇವಕರನ್ನು ಸಮಿತಿ ವತಿಯಿಂದ ಸ್ಮರಣಿಕೆ ನೀಡಿಅಭಿನಂದಿಸಲಾಯಿತು.
ಸಂಜೆ ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಗಣೇಶ್ ಪಿಲಿಕಜೆ ಪ್ರಾರ್ಥಿಸಿದರು. ಆಡಳಿತ ಮಂಡಳಿಯ ಸದಸ್ಯ ಶ್ರೀಸ ಕುಮಾರ್ ಸ್ವಾಗತಿಸಿದರು. ಶಿಕ್ಷಕ ಪದ್ಯಾಣ ನಾರಾಯಣ ಭಟ್ ವಂದಿಸಿದರು. ದಯಾನಂದ ಪತ್ತುಕುಂಜ ಮತ್ತು ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.