ಸುಬ್ರಮಣ್ಯ- ಮಂಜೇಶ್ವರ ರಾಜ್ಯ ಹೆದ್ದಾರಿಯ ಅಡ್ಡಬೈಲಿನ ಬಾಂಕಿ ಎಂಬ ಅಪಾಯಕಾರಿ ರಸ್ತೆ ತಿರುವನ್ನು ನೇರಗೊಳಿಸುವ ಕಾಮಗಾರಿಗೆ ಸಚಿವರಾದ ಎಸ್ ಅಂಗಾರ ಏ. 25ರಂದು ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು ಕಳೆದ ಎಂಟು ವರ್ಷಗಳಿಂದ ಇಲ್ಲಿ ನಿರಂತರ ಅಫಘಾತ ನಡೆಯುತ್ತಿದ್ದುದ್ದನ್ನು ಕಂಡು ಈ ಭಾಗದ ಕಾರ್ಯಕರ್ತರ ನಿರಂತರ ಒತ್ತಡದ ಮೇರೆಗೆ ಪಿ.ಎಂ.ಆರ್.ಸಿ. ಯೋಜನೆಯಲ್ಲಿ ರೂ. 85 ಲಕ್ಷ ಮೊತ್ತವನ್ನು ಮಂಜೂರುಗೊಳಿಸಲಾಗಿದ್ದು, ಕಾಮಗಾರಿ ಶೀಘ್ರದಲ್ಲಿ ಮುಗಿಯಲಿದೆ ಎಂದರು. ಈ ಸಂದರ್ಭದಲ್ಲಿ ಬಿ.ಜೆ.ಪಿ. ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ವೆಂಕಟ್ ವಳಲಂಬೆ, ವೆಂಕಟ್ ದಂಬೆಕೋಡಿ, ಬಳ್ಪ ಗ್ರಾ. ಪಂ. ಅಧ್ಯಕ್ಷೆ ಶ್ರೀಮತಿ ಕುಸುಮ ಎಸ್ ರೈ, ಬಳ್ಪ ಕೇನ್ಯದ ಭಾಗದ ಪಕ್ಷದ ಕಾರ್ಯಕರ್ತರು, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ಕುಳ ಸ್ವಾಗತಿಸಿ ವಿನೋದ್ ಬೊಳ್ಮಲೆ ವಂದಿಸಿದರು .