ಜಾಲ್ಸೂರು ಗ್ರಾಮದ ಕುಕ್ಕನ್ನೂರು ಶ್ರೀ ಕಿನ್ನಿಮಾಣಿ – ಪೂಮಾಣಿ ದೈವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವವು ಮೇ.2ರಿಂದ ಮೇ.6ರವರೆಗೆ ಜರುಗಲಿದ್ದು, ಜಾತ್ರೋತ್ಸವಕ್ಕೆ ಎ.26ರಂದು ಮುಹೂರ್ತದ ಗೊನೆ ಕಡಿಯಲಾಯಿತು.
ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮೊಕ್ತೇಸರ ಬಾಲಕೃಷ್ಣ ಗೌಡ ನಡುಬೆಟ್ಟು, ಪ್ರಧಾನ ಅರ್ಚಕ ಸುಭಾಷ್ ರೈ ಕುಕ್ಕಂದೂರು, ವೆಂಕಟ್ರಮಣ ಭಟ್ ಬೊಮ್ಮೆಟ್ಟಿ, ನಯನ ಸುತ್ತುಕೋಟೆ, ಗಂಗಾಧರ ಗೌಡ ಮಾರಡ್ಕ, ರಾಧಾಕೃಷ್ಣ ದೋಳ್ತಿಲ, ಸತೀಶ್ ಕೊಮ್ಮೆಮನೆ, ಪುಟ್ಟಣ್ಣ ಗೌಡ ಹುಲಿಮನೆ, ದಿನೇಶ್ ಹುಲಿಮನೆ, ಭಾಸ್ಕರ ಗೌಡ ಕೊಮ್ಮೆಮನೆ, ಚಿದಾನಂದ ಗೋಪಾಲಕಜೆ, ಸುಹಾನ್ ಕೊಮ್ಮೆಮನೆ ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು.