ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕ ವಿಷ್ಣುನಗರ ಶ್ರೀವಿಷ್ಣುಮೂರ್ತಿ ಶ್ರೀ ರಕ್ತೇಶ್ವರಿ ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ಮಹೋತ್ಸವ ಎ.25 ರಂದು ನಡೆಯಿತು.
ಸಂಜೆ ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಸೇವೆಯಾಗಿ ಬಳಿಕ ಧಾರ್ಮಿಕ ಸಭೆಯು ನಡೆಯಿತು. ವಿಷ್ಣುಮೂರ್ತಿ ದೈವದ ಭಂಡಾರ ತೆಗೆದು ಬಳಿಕ ಮೇಲೇರಿಗೆ ಅಗ್ನಿ ಸ್ಪರ್ಶ ಮಾಡಲಾಯಿತು.ರಾತ್ರಿ ಸಾರ್ವಜನಿಕ ಅನ್ನ ಸಂತರ್ಪಣೆಯಾಯಿತು. ಶ್ರೀವಿಷ್ಣುಮೂರ್ತಿ ದೈವದ ಕುಲ್ಚಾಟು ನರ್ತನ ಸೇವೆಯಾಗಿ ಮರುದಿನ ಪ್ರಾತಃಕಾಲ ಶ್ರೀ ದೈವದ ಅಗ್ನಿಸೇವೆನಡೆಯಿತು.
ನಂತರ ದೈವದ ಬಾರಣೆಯಾಗಿ ಯಂ.ಪಿ.ಜಿ.ಕೆ.ಯವರ ಅಶ್ವತ್ಥ ವೃಕ್ಷ ಪೂಜೆ ನಡೆಯಿತು. ಮಾಯಿಪಡ್ಕ ಮನೆಯಲ್ಲಿ ಶ್ರೀ ವಿಷ್ಣುಮೂರ್ತಿ ದೈವದ ಕ್ಷೀರ ಸೇವನೆಯಾಗಿ ದೈವಸ್ಥಾನಕ್ಕೆ ಆಗಮಿಸಿ ಭಕ್ತಾದಿಗಳಿಗೆ ಪ್ರಸಾದವಿತರಣೆಯಾಯಿತು. ಸಾಂಸ್ಕೃತಿಕ ಅಂಗವಾಗಿ ರಾತ್ರಿ ಯಕ್ಷಗಾನ ವೈಭವ ಮತ್ತು ಯಕ್ಷ ನೃತ್ಯ ರೂಪಕ ಪ್ರದರ್ಶನಗೊಂಡಿತು. ಬಳಿಕ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಬಯಲಾಟ “ತ್ರಿಜನ್ಮ ಮೋಕ್ಷ ಎಂಬ ಪ್ರಸಂಗ ಪ್ರದರ್ಶನವಾಯಿತು. ಆಗಮಿಸಿದ ಭಕ್ತಾದಿಗಳಿಗೆ ನಿರಂತರ ಅನ್ನ ಸಂತರ್ಪಣೆ ಹಾಗೂ ಬೆಳಗ್ಗೆ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.