ಅಡ್ಡಣ ಪೆಟ್ಟು ವೀಕ್ಷಿಸಿದ ಸಾವಿರಾರು ಭಕ್ತರು
ಮಂಡೆಕೋಲು ದೇವಸ್ಥಾನದ ದೇವರ ಜಾತ್ರೋತ್ಸವ ನಡೆಯುತ್ತಿದ್ದು ನಿನ್ನೆ ದೇವರ ಉತ್ಸವ ಬಲಿ ನಡೆದಿತ್ತು. ಇಂದು ದೇವಸ್ಥಾನದಲ್ಲಿ ಉಳ್ಳಾಕುಲು ದೈವದ ನೇಮೋತ್ಸವ ಹಾಗೂ ಅಡ್ಡಣ ಪಟ್ಟು ಉತ್ಸವ ನಡೆಯಿತು.
ಈ ಉತ್ಸವದಲ್ಲಿ ಊರ ಹಾಗೂ ಪರವೂರ ಸಾವಿರಾರು ಭಕ್ತರು ಭಾಗವಹಿಸಿ ನೇಮೋತ್ಸವ ಹಾಗೂ ಅಡ್ಡಣ ಪೆಟ್ಟು ಉತ್ಸವ ವನ್ನು ಕಣ್ತುಂಬಿಕೊಂಡರು.
ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ಜರುಗಿತು.