ನಿಂತಿಕಲ್ಲಿನ ಸಾನಿಧ್ಯ ಸಂಕೀರ್ಣದಲ್ಲಿ ಮಹಮ್ಮದ್ ಕಲ್ಲೇರಿ ಮಾಲಕತ್ವದ ಸೆಲ್ ಪಾಯಿಂಟ್ ಮೊಬೈಲ್ಸ್ ಮತ್ತು ಎ.ಎಂ.ಸ್ಟೈಲ್ ಪಾರ್ಕ್ ಫೂಟ್ ವೇರ್ ಏಪ್ರಿಲ್ 25 ರಂದು ಶುಭಾರಂಭಗೊಂಡಿತು.
ನಿಂತಿಕಲ್ಲು ಕಜೆ ಮಸೀದಿಯ ಖತಿಬರಾದ ಜಾಫರ್ ಸಅದಿ ಪಳ್ಳತ್ತೂರು ದುವಾ ಕಾರ್ಯಕ್ರಮ ನೆರವೇರಿಸಿದರು.
ಸಂಸ್ಥೆಯ ಮಾಲಕ ಮುಹಮ್ಮದ್ ಕಲ್ಲೇರಿಯ ರಿಬ್ಬನ್ ಕಟ್ ಮಾಡಿ ಶುಭಾರಂಭಗೊಳಿಸಿ, ನಮ್ಮ ಸಹ ಸಂಸ್ಥೆಗಳಲ್ಲಿ ವ್ಯವಹರಿಸಿದ ಹಾಗೆ ಈ ಸಂಸ್ಥೆಯಲ್ಲಿ ಗ್ರಾಹಕರು ಹೆಚ್ಚೆಚ್ಚು ಭಾಗವಹಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯ ಅಬ್ದುಲ್ ಗಫೂರ್ ಕಲ್ಮಡ್ಕ, ಕಾಂಪ್ಲೆಕ್ಸ್ ಮಾಲಕ ತಿಮ್ಮಪ್ಪಗೌಡ ಮಲ್ಲಾರ, ಸಹಸಂಸ್ಥೆಗಳಾದ ಶುಂಠಿಕೊಪ್ಪ ಡಾಕ್ಟರ್ ಮೊಬೈಲ್ಸ್, ಸಿದ್ದಾಪುರ ನೆಲ್ಯಹುಡ್ಕೇರಿಯ ಸಿಬ್ಬಂದಿವರ್ಗ, ಕಡಬ ಪಿಝೂ ಮೆನ್ಸ್ ಪಾರ್ಕ್ ಮಾಲಕ ನಿಝಾಕ್, ಸಂಸ್ಥೆಯ ಮಾಲಕ ಮುಸ್ತಫಾ, ರಝಾಕ್, ರಫೀಕ್, ಗ್ರಾಹಕರು, ವರ್ತಕರು ಉಪಸ್ಥಿತರಿದ್ದರು.