Breaking News

ಅರಂತೋಡು ವಾಹನ ಚಾಲಕ ಮಾಲಕರ ನೇತೃತ್ವದಲ್ಲಿ ನಡೆದ ಹಗ್ಗಜಗ್ಗಾಟದಲ್ಲಿ ಹೊಡೆದಾಟ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಸಾಮಾಜಿಕ ಜಾಲತಾಣದಲ್ಲಿ ಹೊಡೆದಾಟದ ವೀಡಿಯೋ ವೈರಲ್

ಅರಂತೋಡಿನ ವಾಹನ ಚಾಲಕ ಮಾಲಕರ ಸಂಘದ ನೇತೃತ್ವದಲ್ಲಿ ಎ.24 ರಂದು ರಾತ್ರಿ ನಡೆದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಸಂಘಟಕರು ಮತ್ತು ಆಟವಾಡಲು ತೆರಳಿದ್ದ ಮಂಡೆಕೋಲಿನ ತಂಡದ ನಡುವೆ ಚಕಮಕಿ ನಡೆದು ಹೊಡೆದಾಡಿಕೊಂಡ ಹಾಗೂ ನಾಯಕರು ಮಧ್ಯ ಪ್ರವೇಶಿಸಿ ಹೊಡೆದಾಟವನ್ನು ಬಿಡಿಸಿದ ಘಟನೆ ನಡೆದಿದೆ.

ಅರಂತೋಡು ಶಾಲಾ ಮೈದಾನದಲ್ಲಿ ಪುರುಷರ ಹಗ್ಗಜಗ್ಗಾಟ ಸ್ಪರ್ಧೆಯನ್ನು ಅರಂತೋಡಿನ ವಾಹನ ಚಾಲಕ ಮಾಲಕರು ಏರ್ಪಡಿಸಿದ್ದರು. ಈ ಪಂದ್ಯಾವಳಿಯಲ್ಲಿ ಭಾಗವಹಿಸಲು ಮಂಡೆಕೋಲಿನ ಶಿವಾಜಿನಗರದ ಯುವಕರು ತೆರಳಿ ಮೂರು ತಂಡವನ್ನು ನೋಂದಾಯಿಸಿಕೊಂಡರು. ಪಂದ್ಯಾಟಕ್ಕೆ ನೋಂದಾವಣೆ ಮಾಡಿಕೊಂಡ ತಂಡಗಳ ನಡುವೆ ಟೈಸ್ ಹಾಕಿದಾಗ ಶಿವಾಜಿನಗರದ ಮೂರು ತಂಡಗಳು ಎದುರುಬದುರಾಗಿ ಒಂದೇ ವಿಭಾಗದಲ್ಲಿ ಕಾಣಿಸಿಕೊಂಡವೆಂದೂ, ಆಗ ಶಿವಾಜಿನಗರದ ಯುವಕರು ಸಂಘಟಕರ ಬಳಿ ಹೋಗಿ ಮೂರು ತಂಡವನ್ನು ಒಂದೇ ಭಾಗದಲ್ಲಿ ಹಾಕಿದರೆ ನಮ್ಮೊಳಗೇ ಸ್ಪರ್ಧೆ ನಡೆದಂತಾಗುತ್ತದೆ. ಇದು ಸರಿಯಲ್ಲ ನೀವು ನಮ್ಮ ಎದುರು ಬೇರೆ ತಂಡವನ್ನು ಹಾಕುವಂತೆ ವಿನಂತಿಸಿದರೆಂದೂ, ಆಗ ಸಂಘಟಕರಲ್ಲೊಬ್ಬರು ಆಯೋಜಕರ ತೀರ್ಮಾನ ದಂತೆ ನೀವು ಆಡಬೇಕು ಎಂದು ಶಿವಾಜಿನಗರ ತಂಡವರಿಗೆ ಹೇಳಿದರೆನ್ನಲಾಗಿದೆ. ಈ ವೇಳೆ ಶಿವಾಜಿನಗರ ತಂಡದ ಯುವಕರು ನೀವು ನಮ್ಮನ್ನೆ ಎದುರೆದುರು ಆಡಿಸಿದರೆ ಅದು ಸರಿಯಾದ ಕ್ರಮ ಅಲ್ಲ. ಹೀಗೆ ಆಡುವುದಾದರೆ ನಾವು ಅಲ್ಲಿಂದ ಯಾಕೆ ಬರಬೇಕಿತ್ತು ಎಂದು ಸಂಘಟಕರನ್ನು ಪ್ರಶ್ನಿಸಿದರೆಂದೂ, ಅವರ ಮಾತಿಗೆ ಸಂಘಟಕರೂ ಎದುರುತ್ತರ ನೀಡಿದರೆನ್ನಲಾಗಿದೆ. ಈ ವೇಳೆ ಸಂಘಟಕರು ಹಾಗೂ ಶಿವಾಜಿನಗರ ಯುವಕರ ತಂಡದ ನಡುವೆ ಚಕಮಕಿ ನಡೆದು, ಪರಸ್ಪರ ಹೊಡೆದಾಟವಾಯಿತು. ಯುವಕರ ಬೊಬ್ಬೆ ಕೇಳಿ ದೂರದಲ್ಲಿದ್ದ ಜಿ.ಪಂ. ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ಅರಂತೋಡು ಸಹಕಾರ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಮತ್ತಿತರರು ಅಂಕಣಕ್ಕೆ ಬಂದು ಹೊಡೆದಾಟ ಬಿಡಿಸಿದರೆಂದೂ ತಿಳಿದು ಬಂದಿದೆ.

 

ಬಳಿಕ ಶಿವಾಜಿನಗರದ ಯುವಕರು ನಾವು ಆಡುವುದಿಲ್ಲವೆಂದೂ ಹೋರಗೆ ಬಂದರೆಂದೂ ತಿಳಿದು ಬಂದಿದೆ. ಅಂಕಣದೊಳಗೆ ಹೊಡೆದಾಡಿಕೊಳ್ಳುತ್ತಿರುವ ಹಾಗೂ ನಾಯಕರು ಮಧ್ಯಪ್ರವೇಶಿಸಿ ತಂಡವನ್ನು ದೂರ ಕಳುಹಿಸುತ್ತಿರುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಈ ಕುರಿತು ಸಂಘಟಕರಲೊಬ್ಬರಾದ ಪ್ರಸನ್ನರನ್ನು ಸಂಪರ್ಕಿಸಿ ವಿಚಾರಿಸಿದಾಗ, ನಮ್ಮಲ್ಲಿ ಯಾವುದೇ ಗಲಾಟೆ ಆಗಿಲ್ಲ ಎಂದು ಹೇಳಿದರು.

ಶಿವಾಜಿನಗರ ತಂಡದ ಯುವಕರಾದ ಚರಣ್ ಮತ್ತು ಸುನಿಲ್ ರನ್ನು ಘಟನೆಯ ಕುರಿತು ವಿಚಾರಿಸಿದಾಗ ನಮ್ಮದು ಮೂರು ತಂಡಗಳಿತ್ತು. ಫೀಸ್ ನೀಡಿ ನೋಂದಣಿ ಮಾಡಿದ್ದೆವು. ಟೈಸ್ ಹಾಕುವಾಗ ನಮ್ಮನ್ನು ಎದುರೆದು ಹಗ್ಗ ಎಳೆಯಲು ಹಾಕಿದ್ದರು. ನಾವು ಇದನ್ನು ಬದಲಾಯಿಸಿ ಎಂದು ವಿನಂತಿಸಿದ್ದೆವು. ಈ ವೇಳೆ ಚಕಮಕಿ ನಡೆಯಿತು ಎಂದು ಹೇಳಿದರು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.