ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮರಕತ
ಇದರ ವಾರ್ಷಿಕ ಜಾತ್ರೋತ್ಸವ ಎ.23 ಮತ್ತು ಎ.24 ರಂದು ನಡೆಯಿತು.

 

ಎ. 23 ರಂದು ಬೆಳಗ್ಗೆ ಚಂಡಿಕಾ ಹವನ ಬಳಿಕ ಉಗ್ರಾಣ ತುಂಬಿಸುವ ಕಾರ್ಯಕ್ರಮ ನಡೆಯಿತು . ರಾತ್ರಿ ದೇವರ ಬಲಿ ಹೊರಟು ಶ್ರೀ ಭೂತ ಬಲಿ ಉತ್ಸವ, ಕಟ್ಟೆಪೂಜೆ ನಡೆಯಿತು. 24 ರ ಬೆಳಗ್ಗೆ ಗಣಪತಿ ಹವನ,ಕಲಶ ಪೂಜೆ ಆಗಿ ಶ್ರೀ ದೇವರ ಬಲಿ ಹೊರಟು ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆಯಿತು. ಮಧ್ಯಾಹ್ನ ದೇವರಿಗೆ ಕಲಶಾಭಿಷೇಕ, ಮಹಾಪೂಜೆ, ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ ನಡೆಯಿತು . ರಾತ್ರಿ ರಂಗಪೂಜೆ ನಡೆದು ಪ್ರಸಾದ ವಿತರಣೆಯ ಬಳಿಕ ಶ್ರೀ ಕ್ಷೇತ್ರದ ದೈವಗಳ ಭಂಡಾರ ತೆಗದು ಶ್ರೀ ಕ್ಷೇತ್ರದ ದೈವ ಶ್ರೀ ಚಾಮುಂಡಿ ಅಮ್ಮನವರ ನೇಮೋತ್ಸವ ನಡೆದು ಪ್ರಸಾದ ವಿತರಣೆ ನಡೆಯಿತು. ಬಳಿಕ ಶ್ರೀ ವರ್ಣಾರ ಪಂಜುರ್ಲಿ,
ಶ್ರೀ ಪುರುಷ ದೈವಗಳ ನೇಮ ನಡೆದು ಪ್ರಾತಃಕಾಲ ಗಂಟೆ ಶ್ರೀ ಕುಪ್ಪೆ ಪಂಜುರ್ಲಿ, ಶ್ರೀ ಭೂಮಿ ಗುಳಿಗ, ರಾಹು ಗುಳಿಗ ದೈವಗಳ ನೇಮೋತ್ಸವ ನಡೆಯಿತು.
*ಧಾರ್ಮಿಕ, ಸಾಂಸ್ಕ್ರತಿಕ, ಕಾರ್ಯಕ್ರಮ*

ಎ.23 ರಂದು ಅರ್ಧ ಏಕಾಹ ಭಜನೆ ನಡೆಯಿತು. ವಿವಿಧ ಭಜನಾ ಮಂಡಳಿಯ ತಂಡದವರು ಬಂದು ಸೇವೆ ಪೂರೈಸಿದರು.
ಅದೇ ದಿನ ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆದಿದ್ದು ನಳಿನಿ ವಿ ಆಚಾರ್ ಧಾರ್ಮಿಕ ಭಾಷಣ ಮಾಡಿದರು. ಅಧ್ಯಕ್ಷತೆಯನ್ನು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಮಾವಿನಕಟ್ಟೆ ವಹಿಸಿದ್ದರು . ಮುಖ್ಯ ಅತಿಥಿಗಳಾಗಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ , ಗುತ್ತಿಗಾರು ಗ್ರಾ.ಪಂ.ಅಧ್ಯಕ್ಷೆ ಶ್ರೀಮತಿ ರೇವತಿ ಆಚಳ್ಳಿ , ಉಪಾಧ್ಯಕ್ಷೆ ಶ್ರೀಮತಿ ಪ್ರಮೀಳ ಎರ್ದಡ್ಕ ಉಪಸ್ಥಿತರಿದ್ದರು. ಉತ್ಸವ ಸಮಿತಿ ಅಧ್ಯಕ್ಷ ಬಾಲಕೃಷ್ಣ ಉಜಿರಡ ಹಾಗೂ ವ್ಯವಸ್ಥಾಪನಾ ಸಮಿತಿ ಸದಸ್ಯರು ವೇದಿಕೆಯಲ್ಲಿದ್ದರು
ಏ .24 ರಂದು ಅಪರಾಹ್ನ ತೆಲಿಕೆದ ತೇಟ್ಲಿ ತುಳು ಯಕ್ಷ ಹಾಸ್ಯ ವೈಭವ ಪ್ರದರ್ಶನ ನಡೆಯಿತು.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.