ಬೆಳ್ಳಾರೆ ಗ್ರಾಮದ ಕಲ್ಲೋಣಿಯಲ್ಲಿ ಇತ್ತೀಚೆಗೆ ಸುರಿದ ಭಾರಿ ಗಾಳಿ ಮಳೆಗೆ ಚೆನ್ನಪ್ಪ ಗೌಡ ಕಲ್ಲೋಣಿವರ ಮನೆಯ ಮೇಲೆ ಮರ ಬಿದ್ದು ಮನೆ ಸಂಪೂರ್ಣ ನಾಶವಾಗಿದ್ದು ಇವರಿಗೆ ಬೆಳ್ಳಾರೆ ರೋಟರಿ ಕ್ಲಬ್ ವತಿಯಿಂದ ಧನ ಸಹಾಯ ನೀಡಲಾಯಿತು.
ರೋಟರಿ ಕ್ಲಬ್ ಅಧ್ಯಕ್ಷ ಪದ್ಮನಾಭ ಬೀಡು ಧನಸಹಾಯ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ರೊ.ಎ.ಕೆ
ಮಣಿಯಾಣಿ, ನವೀನ ರೈ ತಂಬಿನಮಕ್ಕಿ, ವಿನಯ ಕುಮಾರ್, ಮೋನಪ್ಪ ತಂಬಿನಮಕ್ಕಿ,ಶಶಿಧರ ಬಿ.ಕೆ, ಕೇಶವಮೂರ್ತಿ ಹಾಗೂ ಇತರರು ಉಪಸ್ಥಿತರಿದ್ದರು.