ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಂಜ ವಲಯ ಹಾಗೂ ಶಾರದಾಂಭಾ ಭಜನಾ ಮಂಡಳಿ ಮೂಲಕ ಸುಳ್ಯ ತಾಲೂಕಿನ ಯೋಜನಾಧಿಕಾರಿ ಚೆನ್ನಕೇಶವ ರವರಿಗೆ ಏ. 27ರಂದು ಬೀಳ್ಕೊಡುಗೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ನೂತನ ಯೋಜನಾಧಿಕಾರಿ ನಾಗೇಶ್ ರವರನು ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಭಜನಾ ಪರಿಷತ್ ರಾಜ್ಯಾಧ್ಯಕ್ಷ ಬಾಲಕೃಷ್ಣ ಪುತ್ಯ, ಮೇಲ್ವಿಚಾರಕಿ ಉಷಾಕಲ್ಯಾಣಿ, ವಲಯದ ಎಲ್ಲಾ ಸೇವಾ ಪ್ರತಿನಿಧಿಗಳು, ಆಂತರಿಕ ಲೆಕ್ಕಪರಶೋಧಕ ಉಮೇಶ್, ವಿಶ್ವನಾಥ ರೈ ಅರ್ಗುಡಿ, ವಿಶ್ವನಾಥ ಸಂಪ, ಮೋನಪ್ಪ ಬೊಳ್ಳಾಜೆ ಹಾಗೂ ಆಡಳಿತ ಮಂಡಳಿ ಸದಸ್ಯರು, ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು