ಮುಖ್ಯ ಮಂತ್ರಿ ಬೊಮ್ಮಯಿಯವರಿಂದ ಪ್ರಶಸ್ತಿ ಸ್ವೀಕರಿಸಿದ ತಾ.ಪಂ. ಇ.ಒ. ಭವಾನಿಶಂಕರ್
ಪಂಚಾಯತ್ ರಾಜ್ ಚಟುವಟಿಕೆಗಳಲ್ಲಿ ಗಣನೀಯ ಸಾಧನೆಗಳನ್ನು ಮಾಡಿದ ಕಾರಣಕ್ಕಾಗಿ ಸುಳ್ಯ ತಾಲೂಕು ಪಂಚಾಯತ್ ಗೆ ಕೇಂದ್ರ ಸರಕಾರವು 2022 ನೇ ಸಾಲಿನ ದಿನದಯಾಳ್ ಉಪಾಧ್ಯಾಯ ಪಂಚಾಯತ್ ಸಶಕ್ತೀಕರಣ ಪುರಸ್ಕಾರ ಲಭಿಸಿದ್ದು ನಿನ್ನೆ ಮೂಡಬಿದಿರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಸುಳ್ಯ ತಾ.ಪಂ. ಇ.ಒ. ಭವಾನಿಶಂಕರ್ ರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಸುಳ್ಯ ಶಾಸಕ, ಸಚಿವ ಎಸ್.ಅಂಗಾರರು ಜತೆಗಿದ್ದು ಶುಭ ಹಾರೈಸಿದರು.