ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ ಬೆಂಗಳೂರು ಪ್ರಾಯೋಜಕತ್ವದಲ್ಲಿ ನಡೆದ 5 ದಿನದ ತರಬೇತಿ
ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಮಹಾತ್ಮಾಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ ಬೆಂಗಳೂರು,ಇವರ ಪ್ರಾಯೋಜಕತ್ವದಲ್ಲಿ ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನೆ ಸಂಸ್ಥೆ , ಕೌಶಲ್ಯಅಭಿವೃದ್ಧಿ,ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ (NRLM) ಸ್ವಚ್ಛ ಭಾರತ್ ಮಿಷನ್ (ಗ್ರಾ) ಜಿಲ್ಲಾ ಪಂಚಾಯತ್,ದಕ್ಷಿಣ ಕನ್ನಡ ಮತ್ತು ತಾಲೂಕು ಪಂಚಾಯತ್,ಸುಳ್ಯ ಇವರ ಸಹಕಾರದೊಂದಿಗೆ ಆಯೋಜಿಸಿರುವ ಸಂಜೀವಿನಿ ಗ್ರಾಮ ಪಂಚಾಯತ್ ಒಕ್ಕೂಟದ ಮಹಿಳೆಯರಿಗೆ ಘನತ್ಯಾಜ್ಯ ನಿರ್ವಹಣೆ ತರಬೇತಿ ಕಾರ್ಯಕ್ರಮ ಏ.26 ರಂದು ತಾಲೂಕು ಪಂಚಾಯತ್ ಸಾಮರ್ಥ್ಯ ಸೌಧದಲ್ಲಿ ನಡೆಯಿತು.
ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್ ರವರು ಗಿಡಕ್ಕೆ ನೀರು ಹಾಕುವುದರ ಮೂಲಕ ತರಬೇತಿಗೆ ಚಾಲನೆ ಕೊಟ್ಟರು.
ಕಾರ್ಯಕ್ರಮದ ಮುಖ್ಯ ಅತಿಥಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲದ ಮುಖ್ಯ ವ್ಯವಸ್ಥಾಪಕ ಮನೋಹರ್ ಕಟ್ಗೇರಿ,ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲದ ಯೋಜನಾ ವ್ಯವಸ್ಥಾಪಕ ಅರುಣ್, ಮಹಾತ್ಮಾಗಾಂಧಿ ಗ್ರಾಮೀಣ ಇಂಧನ ಸಂಸ್ಥೆ ಬೆಂಗಳೂರಿನ ಹಿರಿಯ ಉಪನ್ಯಾಸಕ ರವಿ ಕೆ., ಎನ್.ಆರ್,ಎಲ್, ಎಮ್ ಕಾರ್ಯಕ್ರಮದ ತಾಲೂಕು ವ್ಯವಸ್ಥಾಪಕಿ ಶ್ವೇತ ಗುಡ್ಡೆಮನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತರಬೇತುದಾರರಾಗಿ ಅರಂತೋಡು ಗ್ರಾಮ ಪಂಚಾಯತ್,ಘನತ್ಯಾಜ್ಯ ಘಟಕದ ಮೇಲ್ವಿಚಾರಕಿ ಸೌಮ್ಯಲತಾ,ಅರಂತೋಡು ಗ್ರಾಮ ಪಂಚಾಯತ್ ಸ್ವಚ್ಛತಾ ವಾಹನ ಚಾಲಕಿ ಸುಮಲತಾ, ಎನ್.ಆರ್.ಎಲ್.ಎಂನ ವಲಯ ಮೇಲ್ವಿಚಾರಕರಾದ ಮಹೇಶ್.ಬಿ,ಮತ್ತು ಅವಿನಾಶ್ ಡೆಲ್ಲಾರಿಯೋ,ಸುಶಾಂತ್ ಎಂ. ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ದ ಸಂಜೀವಿನಿ ಸ್ವಚ್ಛತಾ ಸಿಬ್ಬಂದಿಗಳು ಹಾಜರಿದ್ದರು. ಮಹೇಶ್ ಬಿ. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶ್ವೇತ ಗುಡ್ಡೆಮನೆ ವಂದಿಸಿದರು.