ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದ ವಠಾರದಲ್ಲಿ ಪ್ರಥಮ ಸೇವೆಯಾಟವಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ಕಲಾವಿದರ ಕೂಡುವಿಕೆಯಿಂದ ಎ.27 ರಂದು ಆಲೆಟ್ಟಿ ಗ್ರಾಮದ ಬಾಳೆಬಲ್ಪು ಭವಾನಿಶಂಕರ ರವರ ಸೇವೆಯಾಟ ಶ್ರೀ ದೇವಿ ಮಹಾತ್ಮೆ ಎಂಬ ಪೌರಾಣಿಕ ಯಕ್ಷಗಾನ ಬಯಲಾಟ ಪ್ರದರ್ಶನವಾಯಿತು.
ರಾತ್ರಿ ಗಂಟೆ 8.30 ರಿಂದ ಚೌಕಿ ಪೂಜೆಯು ನಡೆದು ಪ್ರಸಾದ ವಿತರಣೆಯಾಯಿತು. ಆಗಮಿಸಿದ ಎಲ್ಲರಿಗೂ ಸಾರ್ವಜನಿಕ ಅನ್ನಸಂತರ್ಪಣೆಯಾಯಿತು. ಊರ, ಪರಊರ ಕಲಾಭಿಮಾನಿಗಳು ಆಗಮಿಸಿ ಯಕ್ಷಗಾನ ವೀಕ್ಷಿಸಿದರು.
ಪರಮೇಶ್ವರ ನಾಯ್ಕ್ ಮತ್ತು ಮನೆಯವರು ಆಗಮಿಸಿದ ಎಲ್ಲರನ್ನು ಸ್ವಾಗತಿಸಿದರು. ರಂಗ ಮಂಟಪವನ್ನು ಹೂವಿನಿಂದ ಅಲಂಕರಿಸಲಾಗಿತ್ತು. ದೇವಳದ ಆವರಣವನ್ನು ವಿದ್ಯುಧ್ದೀಪಗಳಿಂದ ಶೃಂಗಾರ ಮಾಡಲಾಗಿತ್ತು.