ಶೌರ್ಯ ವಿಪತ್ತು ನಿರ್ವಹಣಾ ಘಟಕ ಸುಬ್ರಹ್ಮಣ್ಯ ವಲಯ ನೇತೃತ್ವ
ಶೌರ್ಯ ವಿಪತ್ತು ನಿರ್ವಹಣಾ ಘಟಕ ಸುಬ್ರಹ್ಮಣ್ಯ ವಲಯ ನೇತೃತ್ವದಲ್ಲಿ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಹಯೋಗದೊಂದಿಗೆ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಮೇ.8 ರಂದು ಬೃಹತ್ ನದಿ ಸ್ವಚ್ಛತಾ ಅಭಿಯಾನ ನಡೆಯಲಿದ್ದು ಅದರ ಪೂರ್ವಭಾವಿ ಸಭೆ ಎ.26 ರಂದು ಕೊಲ್ಲಮೊಗ್ರದ ಮಯೂರ ಕಲಾ ಮಂದಿರದಲ್ಲಿ ನಡೆಯಿತು.
ಕಡಮಕಲ್ಲು ನಿಂದ ಹರಿದು ಬರುವ ಹೊಳೆ ಮತ್ತು ಕೂಜುಮಲೆಯಿಂದ ಬರುವ ಹೊಳೆ ಉಗಮದಿಂದ ತಲಾ 5 ಕಿ.ಮೀ ನಂತೆ. ಹಾಗೂ ಕಲ್ಮಕಾರಿನಿಂದ ಎರಡೂ ನದಿಗಳು ಸೇರಿ ಹರಿಯುವ ಗೌರಿ ಹೊಳೆ ಹರಿಹರದ ವರೆಗೆ 10 ಕಿ.ಮೀ ಹೀಗೆ ಒಟ್ಟಾಗಿ 20 ಕಿ. ಮೀ. ಸ್ವಚ್ಛತಾ ಕಾರ್ಯ ನಡೆಯಲಿದೆ . ಪೂರ್ವಭಾವಿ ಸಭೆಯಲ್ಲಿ ಶಿವರಾಮ ಮಾಸ್ತರ್, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸಂಚಾಲಕ ಸತೀಶ್ ಟಿ.ಎನ್., ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕ ಸೀತಾರಾಮ, ಕೊಲ್ಲಮೊಗ್ರು ಗ್ರಾ.ಪಂ ಪಿಡಿಒ ರವಿಚಂದ್ರ, ಸೇವಾ ಪ್ರತಿನಿಧಿಗಳಾದ ಶೋಭಾ ಚಾಳೆಪ್ಪಾಡಿ ಮತ್ತು ಸಾವಿತ್ರಿ, ಡ್ಯಾನಿ ಯಾಳದಾಲು, ಪುಷ್ಪರಾಜ್ ಪಡ್ಪು, ಚಂದ್ರಶೇಖರ ಕೊಂದಾಳ, ಸುರೇಶ್ ಪಿ. ಎಸ್. ಮತ್ತಿತರರು ಉಪಸ್ಥಿತರಿದ್ದರು.