ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸುಳ್ಯ, ತಾಲೂಕು ಕಚೇರಿ ಸುಳ್ಯ ಮತ್ತು ಸುಳ್ಯ ಸಿ.ಎ. ಬ್ಯಾಂಕ್ ಸಂಯುಕ್ತ ಆಶ್ರಯದಲ್ಲಿ ಆಜಾದೀ ಕಾ ಅಮೃತ್ ಮಹೋತ್ಸವ್ ಆಚರಣೆಯನ್ನು ಸುಳ್ಯ ಸಿ.ಎ. ಬ್ಯಾಂಕ್ ವತಿಯಿಂದ ಕಾಂತಮಂಗಲದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪಡಿತರ ಕೇಂದ್ರದಲ್ಲಿ ಆಚರಿಸಲಾಯಿತು. ಸುಳ್ಯ ತಾಲೂಕು ದಂಡಾಧಿಕಾರಿ ಕು. ಅನಿತಾಲಕ್ಷ್ಮಿ ಅರ್ಹ ಫಲಾನುಭವಿಗಳಿಗೆ ಪಡಿತರ ವಿತರಿಸಿ ಭಾರತದ ಸ್ವಾತಂತ್ರ್ಯ ದ ಇತಿಹಾಸದ ಬಗ್ಗೆ ಸಂಕ್ಷಿಪ್ತವಾಗಿ ನೆನಪಿಸಿ ಶುಭ ಹಾರೈಸಿದರು.
ಸುಳ್ಯ ತಾಲೂಕಿನ ಆಹಾರ ನಿರೀಕ್ಷಕರಾದ ಶ್ರೀಮತಿ ವಸಂತಿ ಹಾಗೂ ರಫೀಕ್, ಸುಳ್ಯ ಸಿ.ಎ. ಬ್ಯಾಂಕ್ ಅಧ್ಯಕ್ಷ ಹರೀಶ್ ಬೂಡುಪನ್ನೆ, ಉಪಾಧ್ಯಕ್ಷ ವೆಂಕಟ್ರಮಣ ಮುಳ್ಯ, ನಿರ್ದೇಶಕರಾದ ಅಬ್ದುಲ್ ಕುಂಞಿ ನೆಲ್ಯಡ್ಕ, ಶೀನಪ್ಪ ಬಯಂಬು, ಹೇಮಂತ್ ಕಂದಡ್ಕ, ದಾಮೋದರ ಮಂಚಿ, ಅಜ್ಜಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಸತ್ಯವತಿ ಉಪಸ್ಥಿತರಿದ್ದರು. ಪಡಿತರ ಫಲಾನುಭವಿಗಳು ಹಾಗೂ ಸಿ.ಎ. ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಸೂರ್ತಿಲ ಉಪಸ್ಥಿತರಿದ್ದರು.