ದೇವಚಳ್ಳ ಗ್ರಾಮದ ದೊಡ್ಡಕಜೆ ನಿವಾಸಿ ಶತಾಯುಷಿ, ಗೆಜ್ಜೆ ಅಂಚೆ ಪಾಲಕ ಪುಟ್ಟಣ್ಣ ಗೌಡ ದೊಡ್ಡಕಜೆ ಇಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 105 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ಬಾಲಕೃಷ್ಣ ಗೌಡ, ವಸಂತಕುಮಾರ ಗೌಡ, ಪುತ್ರಿಯರಾದ ಶ್ರೀಮತಿ ದಮಯಂತಿ ಕಲ್ಕುದಿ, ವೇದಾವತಿ ಉಪ್ಪುಕಳ, ಜಾನಕಿ ಕೊಲ್ಲಮೊಗ್ರು ಹಾಗೂ ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.