ಕೊಡಿಯಾಲ ಗ್ರಾಮದ ಪೂರ್ಲಪ್ಪಾಡಿ ಕಲ್ಪಡ ಕೃಷ್ಣಪ್ಪ ಗೌಡರು ಎ.13 ರಂದು ನಿಧನರಾಗಿದ್ದು ಅವರಿಗೆ ಶ್ರದ್ಧಾಂಜಲಿ ಮತ್ತು ವೈಕುಂಠ ಸಮಾರಾಧನೆಯು ಎ.28 ರಂದು ನಡೆಯಿತು.
ಉಮೇಶ್ ಕೆ.ಎಂ.ಬಿ ಕೂರೋಡಿಯವರು ದಿ.ಕೃಷ್ಣಪ್ಪ ಗೌಡ ಕಲ್ಪಡ ಪೂರ್ಲಪ್ಪಾಡಿಯವರ ಬಗ್ಗೆ ಗುಣಗಾನಗೈದು ನುಡಿನಮನ ಸಲ್ಲಿಸಿದರು.ಆಗಮಿಸಿದ ನೂರಾರು ಜನ ಗಣ್ಯರು ದಿ.ಕೃಷ್ಣಪ್ಪ ಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮೃತರ ಪತ್ನಿ ದಾಜಮ್ಮ, ಪುತ್ರರಾದ ರಾಮಚಂದ್ರ, ನಿವೃತ್ತ ಯೋಧ ಕೊರಗಪ್ಪ ಕೆ.ಕೆ., ಪುತ್ರಿಯರಾದ ಶ್ರೀಮತಿ ಇಂದಿರಾ,ಶ್ರೀಮತಿ ಹೇಮಲತಾ, ಶ್ರೀಮತಿ ಸುಮಲತಾ, ಸೊಸೆಯಂದಿರಾದ ಶ್ರೀಮತಿ ಕವಿತ,ಶ್ರೀಮತಿ ಸುಚೇತಾ, ಅಳಿಯಂದಿರು ಮೊಮ್ಮಕ್ಕಳು,ಕುಟುಂಬಸ್ಥರು ಉಪಸ್ಥಿತರಿದ್ದರು.