ಬಾವಿ ಕೆಲಸಗಾರರಿಂದ ಹೊಂಡದಲ್ಲಿದ್ದ ಕರುವಿನ ರಕ್ಷಣೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಮೂರು ದಿನದಿಂದ ಹೊಂಡದಲ್ಲಿದ್ದ ಕರುವೊಂದನ್ನು ಬಾವಿಯ ಕೆಲಸಗಾರರು ರಕ್ಷಿಸಿದ ಘಟನೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದಿದೆ.

ಎ. 24 ರಂದು ಕುಕ್ಕೆಶ್ರೀ ಸುಬ್ರಹ್ಮಣ್ಯದ ಸಮೀಪದ ಇಂಜಾಡಿಯ ಬೆಳ್ಳಿ ಬಾರ್ ಆಂಡ್ ಫ್ಯಾಮಿಲಿ ರೆಸ್ಟೋರೆಂಟ್ ನ ಬಳಿಯಲ್ಲಿರುವ ಮುಂಡೋಡಿ ಮನೆತನದವರ ಜಾಗದಲ್ಲಿ ಬಾವಿ ಕೆಲಸ ನಡೆಯುತ್ತಿದ್ದ ಸಂದರ್ಭದಲ್ಲಿ ನೀರು ಸಿಕ್ಕಾಗ ತೆಂಗಿನ ಕಾಯಿ ಒಡೆಯುವ ಕ್ರಮಕ್ಕಾಗಿ ವೀಳ್ಯದೆಲೆ, ಅಡಿಕೆ, ತುಂಬೆ ಹೂ, ಕಾಡು ಕೇಪುಲ ಹೂ, ಬೆಳ್ತಿಗೆ ಅಕ್ಕಿಯೊಂದಿಗೆ ದಾನ ಬಿಡುವುದಕ್ಕಾಗಿ ಬಾಳೆ ಎಲೆಯ ಅಗತ್ಯವಿತ್ತು.

https://youtube.com/shorts/JVQayR3cxJE?feature=share

ಹಾಗಾಗಿ ಬಾಳೆ ಎಲೆಗಾಗಿ ಪಕ್ಕದ ತೋಟಕ್ಕೆ ಹೋದಾಗ , ದಾರಿಮಧ್ಯೆ ಗಿಡಗುಂಟೆಗಳಿಂದ ತುಂಬಿದ ಪೊದೆ ಅಲ್ಲಾಡುವುದು ಕಂಡು ಬಂತು. ನೋಡಿದಾಗ, ನಡುವಿರುವ ಯಾರಿಗೂ ಕಾಣದ 5-6 ಅಡಿ ಆಳದ ಹೊಂಡದಲ್ಲಿ ಗಂಡು ಕರು ಬಿದ್ದಿದ್ದು, ಮೇಲೆ ಬರಲು ಪ್ರಯತ್ನಿಸಿ ಕಂಗಾಲಾಗಿ ನಿಂತಿತ್ತು. ಅದು ಅದರ ಆಕಾರಕ್ಕೆ ಇಕ್ಕಟ್ಟಾದ ಹೊಂಡವಾದ ಕಾರಣ, ಮಲಗಲು, ಆ ಕಡೆ ಈ ಕಡೆ ತಿರುಗಾಡಲು ಸಾಧ್ಯವಾಗದೆ ಅಸಹಾಯಕ ನಿಂತ ಸ್ಥಿತಿಯಲ್ಲಿತ್ತು. ಬಾವಿ ಕೆಲಸದ ತಂಡದವರಾದ ಪರ್ವತಮುಖಿಯ ವಾಸುದೇವ,ದಯಾನಂದ, ಹೇಮಂತ ಎನ್., ಹೇಮಂತ ಪಿ., ಬಾಬು ಪಿ., ನಂದನ್ ಇವರ ಸಹಾಯದೊಂದಿಗೆ ಕರುವನ್ನು ಹಗ್ಗದ ಮುಖಾಂತರ ಮೇಲೆ ಎತ್ತಲಾಯಿತು.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.