Breaking News

ಶೇಣಿ ಸಂಸ್ಮರಣೆ: ಕಲಾವಿದ ಶೇಖರ ಮಣಿಯಾಣಿಯವರಿಗೆ ಶೇಣಿ ಪ್ರಶಸ್ತಿ ಪ್ರದಾನ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್ ಮತ್ತು ಸುಳ್ಯ ಘಟಕ, ಹರಿಕಥಾ ಪರಿಷತ್ ಮಂಗಳೂರು, ಶ್ರೀರಾಘವೇಂದ್ರ ಮಠ ಸುಳ್ಯ ಇದರ ಆಶ್ರಯದಲ್ಲಿ ನಡೆದ ಶೇಣಿ ಸಂಸ್ಮರಣಾ ಕಾರ್ಯಕ್ರಮ ಹಾಗು ಶೇಣಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಯಕ್ಷ ಸಂಘಟಕ, ಸುಳ್ಯದ ಹಿರಿಯ ಯಕ್ಷಗಾನ ಕಲಾವಿದ ಶೇಖರ ಮಣಿಯಾಣಿ ಅವರಿಗೆ ಶೇಣಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.


ನಿವೃತ್ತ ಪ್ರಾಂಶುಪಾಲ ಡಾ. ಪ್ರಭಾಕರ ಶಿಶಿಲ ಮಾತನಾಡಿ, ತಮ್ಮ ಪ್ರಬುದ್ಧ ಅರ್ಥಗಾರಿಕೆಯಿಂದ ತೆಂಕುತಿಟ್ಟಿನ ಯಕ್ಷಗಾನಕ್ಕೆ ಮೆರಗು ನೀಡಿದ ಶೇಣಿ ಮಾತಿನ ತರ್ಕಕ್ಕೆ ಹೆಚ್ಚು ಒತ್ತು ನೀಡಿದರು. ಆದರೂ ಅವರು ಸಾಂಪ್ರದಾಯಿಕ ಚೌಕಟ್ಟನ್ನು ಎಂದೂ ಮೀರಿದವರಲ್ಲ ಎಂದರು.
ಸಭಾಧ್ಯಕ್ಷತೆ ವಹಿಸಿದ ಶೇಣಿ ಪ್ರತಿಷ್ಠಾನದ ಅಧ್ಯಕ್ಷ ಎಂ.ಆರ್.ವಾಸುದೇವ, ಶೇಖರ್ ಮಣಿಯಾಣಿಯವರನ್ನು ಅಭಿನಂದಿಸಿದರು. ರಾಘವೇಂದ್ರ ಮಠದ ಟ್ರಸ್ಟಿ ಪ್ರಕಾಶ್ ಮೂಡಿತ್ತಾಯ ಸನ್ಮಾನಿತರನ್ನು ಪರಿಚಯಿಸಿದರು. ಕುಂಟಾರು ರವೀಶ ತಂತ್ರಿ ಶುಭಾಶಂಸನೆಗೈದರು. ಶ್ರೀ ರಾಘವೇಂದ್ರ ಮಠದ ಅಧ್ಯಕ್ಷ ಎಂ.ಎನ್.ಶ್ರೀಕೃಷ್ಣ ಸೋಮಯಾಗಿ, ನಿವೃತ್ತ ಅಧಿಕಾರಿ ಎ.ಕೆ.ನಾಯ್ಕ ಚೊಕ್ಕಾಡಿ, ಟ್ರಸ್ಟ್‌ನ ಕೋಶಾಧಿಕಾರಿ ಜಿ.ಕೆ.ಭಟ್, ಹರಿಕಥಾ ಪರಿಷತ್‌ನ ಅಧ್ಯಕ್ಷ ಕೂಡ್ಲು ಮಹಾಬಲ ಶೆಟ್ಟಿ ಶುಭಹಾರೈಸಿದರು.
ಕಾರ್ಯದರ್ಶಿ ಪಿ.ವಿ.ರಾವ್, ಪದ್ಮನಾಭ ಶೆಟ್ಟಿ ನಿರೂಪಿಸಿದರು. ಬಳಿಕ ತೆಂಕು ಮತ್ತು ಬಡಗು ತಿಟ್ಟಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಶ್ರೀರಾಮ ನಿರ್ಯಾಣ ಮತ್ತು ಶಿವಭಕ್ತ ವೀರಮಣಿ ಯಕ್ಷಗಾನ ತಾಳಮದ್ದಳೆ ನಡೆಯಿತು. ಎಂ.ಆರ್.ವಾಸುದೇವ ಅವರು ಹರಿಭಕ್ತ ಸಾರ ಉಪನ್ಯಾಸ ನೀಡಿದರು.
ಹರಿಕಥಾ ಸಪ್ತಾಹ : 
ಶ್ರೀರಾಘವೇಂದ್ರ ಮಠದಲ್ಲಿ ನಡೆದ ಹರಿಕಥಾ ಸಪ್ತಾಹದಲ್ಲಿ ಡಾ.ಎಸ್.ಪಿ ಗುರುದಾಸ್.ದೇವಕಿ ತನಯ, ಶಂ.ನಾ.ಅಡಿಗ, ಮಂಜುಳಾ ಜಿ.ರಾವ್, ತೋನ್ಸೆ ಪುಷ್ಕಳ ಕುಮಾರ್, ಚಂದ್ರಕಾಂತ ಭಟ್ ಮತ್ತು ಪಿ.ವಿ.ರಾವ್ ಹರಿಕಥಾ ಕಾಲಕ್ಷೇಪ ನಡೆಸಿಕೊಟ್ಟರು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.