ಐವರ್ನಾಡು ಗ್ರಾಮದ ಮಡ್ತಿಲ ರಾಧಾಕೃಷ್ಣ ರವರು ಎ.18 ರಂದು ನಿಧನರಾಗಿದ್ದು ಅವರಿಗೆ ಶ್ರದ್ಧಾಂಜಲಿ ಮತ್ತು ವೈಕುಂಠ ಸಮಾರಾಧನೆಯು ಎ.28 ರಂದು ಮನೆಯಲ್ಲಿ ನಡೆಯಿತು.
ದಿನೇಶ್ ಮಡ್ತಿಲರವರು ದಿ.ರಾಧಾಕೃಷ್ಣ ಮಡ್ತಿಲರವರ ಬಗ್ಗೆ ಗುಣಗಾನಗೈದು ನುಡಿನಮನ ಸಲ್ಲಿಸಿದರು.ಆಗಮಿಸಿದ ನೂರಾರು ಜನರು ರಾಧಾಕೃಷ್ಣ ಮಡ್ತಿಲರವರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿದರು.
ಈ ಸಂದರ್ಭದಲ್ಲಿ ಮೃತರ ಪತ್ನಿ ಶ್ರೀಮತಿ ಜಯಲಕ್ಷ್ಮೀ, ಪುತ್ರ ಪ್ರೇಕ್ಷಕ್, ಪುತ್ರಿ ಆಶಿಕಾ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.