ಪೆರಾಜೆ ಗ್ರಾಮದ ಕುಂಬಳಚೇರಿ ಮನೆ ಶೀತಲ್ ರವರ ಪತ್ನಿ ಶ್ರೀಮತಿ ರಶ್ಮಿ ಬಿ. ಇವರು ಮಂಗಳೂರು ವಿಶ್ವವಿದ್ಯಾಲಯ ನಡೆಸಿದ ಬಿ.ಎಡ್ ಪರೀಕ್ಷೆಯಲ್ಲಿ 80.33% ಅಂಕ ಪಡೆದು ಡಿಸ್ಟಿಂಕ್ಷನ್ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಇವರು ಪಂಜ ಬೊಳ್ಳಾಜೆ ಮನೆ ದಿ.ಶ್ರೀ ವೆಂಕಪ್ಪ ಗೌಡ ಬಿ. ಹಾಗೂ ಶ್ರೀಮತಿ ಕುಸುಮಾವತಿ ದಂಪತಿಗಳ ಪುತ್ರಿ. ಇವರು ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯ ಪುತ್ತೂರು ಇಲ್ಲಿನ ವಿದ್ಯಾರ್ಥಿನಿ.