ಆಯುರ್ವೇದ ವೈದ್ಯರಾದ ಶ್ರೀಮತಿ ಸೌಮ್ಯ ಸರಸ್ವತಿ ಪದ್ಯಾಣ ಅವರು ಮಂಡಿಸಿದ “ಕ್ರಿಟಿಕಲ್ ಅನಾಲಿಸಿಸ್ ಆಫ್ ಲಕ್ಷಣ ಆಂಡ್ ಪರಿಹಾರ ಆಫ್ ಮನೋರೋಗ ವಿದ್
ರೆಫರೆನ್ಸ್ ಟು ಜ್ಯೌತಿಷ ಶಾಸ್ತ್ರ ಆಂಡ್ ಆಯುರ್ವೇದ” ಎಂಬ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಮಂಗಳೂರಿನ ಹಂಪನಕಟ್ಟೆ ವಿಶ್ವ ವಿದ್ಯಾನಿಲಯ ಕಾಲೇಜಿನ ಸಂಸ್ಕೃತ ಪ್ರಾಧ್ಯಾಪಕರಾದ ಡಾ. ಕುಮಾರಸುಬ್ರಹ್ಮಣ್ಯ ಭಟ್ ಅಮೈ ಅವರ ಮಾರ್ಗದರ್ಶನದಲ್ಲಿ ಈ ಮಹಾಪ್ರಬಂಧವನ್ನು ರಚಿಸಲಾಗಿದೆ.
ಜಾಲ್ಸೂರು ಗ್ರಾಮದ ಮಹಾಬಲಡ್ಕ ದಿ. ಮಹಾಲಿಂಗೇಶ್ವರ ಭಟ್ ಹಾಗೂ ಶ್ರೀಮತಿ ಪರಮೇಶ್ವರಿ ದಂಪತಿಗಳ ಪುತ್ರಿಯಾಗಿರುವ ಈಕೆ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಸಂಶೋಧನಾ ವಿಭಾಗದ ನಿರ್ದೇಶಕರಾದ ಡಾ. ಸುಬ್ರಹ್ಮಣ್ಯ ಪದ್ಯಾಣರವರ ಧರ್ಮಪತ್ನಿ.
ಡಾ. ಸೌಮ್ಯ ಪದ್ಯಾಣ ಅವರು ಪ್ರಸ್ತುತ ಮೂಡಬಿದಿರೆಯ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಆಯುರ್ವೇದದೊಂದಿಗೆ ಜ್ಯೋತಿಷ್ಯ ಶಾಸ್ತ್ರದ ಅನುಭವವಿರುವ ಇವರು ತಮ್ಮ ಚಿಕಿತ್ಸಾ ಕ್ರಮಗಳಲ್ಲಿ ಇವುಗಳನ್ನು ಅಳವಡಿಸಿ ಯಶಸ್ವಿ ವೈದ್ಯೆಯೆನಿಸಿಕೊಂಡಿದ್ದಾರೆ.
ಮೂಲತಃ ಜಾಲ್ಸೂರಿನ ಗ್ರಾಮದ ಮಹಾಬಲಡ್ಕದವರಾದ ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಜಾಲ್ಸೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕದಿಕಡ್ಕ, ಹಾಗೂ ಪ್ರೌಢಶಿಕ್ಷಣವನ್ನು ಪಯಸ್ವಿನಿ ಪ್ರೌಢ ಶಾಲೆಯಲ್ಲಿ ಅಭ್ಯಸಿಸಿ, ಕಾರ್ಕಳದ ಭುವನೇಂದ್ರ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಪೂರೈಸಿ, ಮೈಸೂರಿನ ಸರಕಾರಿ ಆಯುರ್ವೇದ ಮಹಾವಿದ್ಯಾಲಯದಲ್ಲಿ ಆಯುರ್ವೇದದ ಪದವಿ ಪಡೆದರು