ಗುತ್ತಿಗಾರಿನ ಅಂಗಡಿಗಳ ಮುಂದೆ ರಾತ್ರಿ ಮದ್ಯ ಸೇವಿಸಿ ಅಂಗಡಿ ಮುಂದೆ ಮದ್ಯದ ಬಾಟಲಿ ಒಡೆದು ಹಾಕಿರುವ ಘಟನೆ ವರದಿಯಾಗಿದೆ.
ಎನ್ .ಎಲ್. ಈಶ್ವರ್ ಅವರ ಶಂಖಶ್ರೀ ಪ್ರೊವಿಶನಲ್ ಸ್ಟೋರ್ ನ ಎದುರು ಎ.24 ಮತ್ತು ಎ.25 ರಾತ್ರಿ ಮದ್ಯದ ಬಾಟಲ್ ಗಳನ್ನು ಒಡೆದು ಹಾಕಲಾಗಿದೆ.
ಇದಲ್ಲದೆ ಬೇರೆ ಕೆಲವು ಅಂಗಡಿಗಳ ಮುಂದೆಯೂ ಇದೇ ರೀತಿ ಬಾಟಲ್ ಗಳನ್ನು ಒಡೆದು ಹಾಕಿದ್ದಾರೆ. ಈ ಬಗ್ಗೆ ಗ್ರಾ.ಪಂ.ಗೆ ಮತ್ತು ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿದು ಬಂದಿದೆ.