ಉಬರಡ್ಕಮಿತ್ತೂರು ಗ್ರಾಮದ ಕೊಡಿಯಾಲಬೈಲು ಅಂಗನವಾಡಿ ಕೇಂದ್ರದಲ್ಲಿ ಒಂದನೇ ತರಗತಿಗೆ ಹೋಗುವ ಪುಟಾಣಿಗಳ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಬಾಲವಿಕಾಸ ಸಮಿತಿಯ ಅಧ್ಯಕ್ಷರು, ಮಕ್ಕಳ ಪೋಷಕರು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಪುಟಾಣಿ ಕೃತಿ ಅನಿಸಿಕೆ ವ್ಯಕ್ತಪಡಿಸಿದರು. ಪುಟಾಣಿಗಳು ಪ್ರಾರ್ಥಿಸಿ, ಅಂಗನವಾಡಿ ಕಾರ್ಯಕರ್ತೆ ಸ್ವಾಗತಿಸಿ, ವಂದಿಸಿದರು. ಈ ಸಂದರ್ಭದಲ್ಲಿ ಪುಟಾಣಿಗಳು ಅಂಗನವಾಡಿ ಕೇಂದ್ರಕ್ಕೆ ಚಯರ್ನ್ನು ಕೊಡುಗೆಯಾಗಿ ನೀಡಿದರು.