ಅರಂತೋಡು ಬಸ್ ನಿಲ್ದಾಣದ ಬಳಿ ಶಾಸಕರ ಅನುದಾನದಿಂದ ಸುಮಾರು 5 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ರಿಕ್ಷಾ ನಿಲ್ದಾಣವನ್ನು ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಎ.24ರಂದು ದೀಪ ಬೆಳಗಿಸಿ, ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ವಾಹನ ಚಾಲಕ-ಮಾಲಕ ಸಂಘದ ಅಧ್ಯಕ್ಷ ಮೋಹನ ಪೆರಂಗೋಡಿ ವಹಿಸಿದ್ದರು.
ವೇದಿಕೆಯಲ್ಲಿ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಅರಂತೋಡು-ತೊಡಿಕಾನ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಉಪಾಧ್ಯಕ್ಷ ದಯಾನಂದ ಕುರುಂಜಿ, ಕೆ.ಆರ್.ಪದ್ಮನಾಭ, ಪುಷ್ಪಾ ಮೇದಪ್ಪ, ಅರಂತೋಡು ರಿಕ್ಷಾ ಚಾಲಕ-ಮಾಲಕ ಸಂಘದ ಅಧ್ಯಕ್ಷ ಮೋಹನ ಪೆರಂಗೋಡಿ, ತಾಲೂಕು ವಾಹನ ಚಾಲಕ-ಮಾಲಕ ಸಂಘದ ಅಧ್ಯಕ್ಷ ರಾಧಾಕೃಷ್ಣ ಬೈತಡ್ಕ,ಗೀತಾ ಶೇಖರ್, ಭಾರತಿ ಪುರುಷೋತ್ತಮ,ಶಶಿಕಾಂತ ಪಂಡಿತ್, ಅರಂತೋಡು ಗ್ರಾ.ಪಂ. ಉಪಾಧ್ಯಕ್ಷೆ ಶ್ವೇತಾ ಅರಮನೆಗಯ, ಮಾಜಿ.ಜಿ.ಪಂ. ಸದಸ್ಯ ಸತೀಶ ನಾಯ್ಕ, ಎ.ಸಿ.ವಸಂತ, ಸೋಮಶೇಖರ ಪೈಕ, ವಿನೋದ್ ಉಳುವಾರು, ಅರಂತೋಡು ಗ್ರಾ.ಪಂ. ಸದಸ್ಯೆ ಮಾಲಿನಿ, ಶ್ರೀಮತಿ ವಿಮಲ ಪೈಕ, ಚಂದ್ರಶೇಖರ ಚೋಡಿಪಣೆ, ಅರಂತೋಡು ರಿಕ್ಷಾ ಚಾಲಕ-ಮಾಲಕ ಸಂಘದ ಕಾರ್ಯದರ್ಶಿ ರೋಹಿತ್ ಕಲ್ಲುಗದ್ದೆ ಉಪಸ್ಥಿತರಿದ್ದರು. ಅರಂತೋಡು ಗ್ರಾ.ಪಂ. ಸದಸ್ಯ ಶಿವಾನಂದ ಕುಕ್ಕುಂಬಳ ಸ್ವಾಗತಿಸಿ, ಕುಸುಮಾಧರ ಅಡ್ಕಬಳೆ ಪ್ರಾಸ್ತಾವಿಕವಾಗಿ ಮಾತನಾಡಿದರು.