ಅರಂತೋಡು : ವಾಹನ ಚಾಲಕ-ಮಾಲಕ ಸಂಘದ ವತಿಯಿಂದ ಹಗ್ಗಜಗ್ಗಾಟ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಅರಂತೋಡು ವಾಹನ ಚಾಲಕ-ಮಾಲಕ ಸಂಘದ ವತಿಯಿಂದ ಎ.24ರಂದು ಅರಂತೋಡಿನ ಹಿ.ಪ್ರಾ.ಶಾಲೆಯ ಮೈದಾನದಲ್ಲಿ ಹಗ್ಗಜಗ್ಗಾಟ ನಡೆಯಿತು. ಈ ಕಾರ್ಯಕ್ರಮವನ್ನು ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಮತ್ತು ಅರಂತೋಡು ಗ್ರಾ.ಪಂ. ಅಧ್ಯಕ್ಷೆ ಹರಿಣಿ ದೇರಾಜೆ ದೀಪ ಬೆಳಗಿಸಿ, ಉದ್ಘಾಟಿಸಿದರು. ಹಗ್ಗಜಗ್ಗಾಟವನ್ನು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಉದ್ಘಾಟಿಸಿದರು.

 


ವೇದಿಕೆಯಲ್ಲಿ ಅರಂತೋಡು-ತೊಡಿಕಾನ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಕೆ.ಆರ್.ಪದ್ಮನಾಭ, ಅರಂತೋಡು ರಿಕ್ಷಾ ಚಾಲಕ-ಮಾಲಕ ಸಂಘದ ಅಧ್ಯಕ್ಷ ಮೋಹನ ಪೆರಂಗೋಡಿ, ತಾಲೂಕು ವಾಹನ ಚಾಲಕ-ಮಾಲಕ ಸಂಘದ ಅಧ್ಯಕ್ಷ ರಾಧಾಕೃಷ್ಣ ಬೈತಡ್ಕ, ಕುಸುಮಾಧರ ಅಡ್ಕಬಳೆ, ಶಶಿಕಾಂತ ಪಂಡಿತ್,ಶಿವಾನಂದ ಕುಕ್ಕುಂಬಳ ಉಪಸ್ಥಿತರಿದ್ದರು. ಹಗ್ಗಜಗ್ಗಾಟ ಕಾರ್ಯಕ್ರಮಕ್ಕೆ ಪುರುಷರ 26 ತಂಡಗಳು, ಮಹಿಳೆಯರ 6 ತಂಡಗಳು ಭಾಗವಹಿಸಿದ್ದವು, ಪುರುಷರ ವಿಭಾಗದ ಪ್ರಥಮ ಸ್ಥಾನವನ್ನು ಕೇರಳದ ಎಸ್.ಎಫ್. ಮಂಞಂಪಾರೆ, ದ್ವಿತೀಯ ಸ್ಥಾನವನ್ನು ಸಮೃದ್ಧಿ ಮಾರ್ಟ್ ಅರಂತೋಡು ಗಳಿಸಿತು. ಮಹಿಳಾ ವಿಭಾಗದ ಪ್ರಥಮ ಸ್ಥಾನವನ್ನು ಜೈ ಶ್ರೀರಾಮ ಕೊಕ್ಕಡ ತಂಡ, ದ್ವಿತೀಯ ಕುಕ್ಕುಜಡ್ಕ ತಂಡ ಗಳಿಸಿತು, ಕಾರ್ಯಕ್ರಮದಲ್ಲಿ ಎಲ್ಲಾ ವಾಹನ ಚಾಲಕ-ಮಾಲಕ ಸಂಘದ ಸದಸ್ಯರು ಸಕ್ರಿಯವಾಗಿ ಭಾಗವಹಿಸಿದ್ದರು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.