ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ 50ನೇ ವರ್ಷಕ್ಕೆ ಪಾದಾರ್ಪಣೆಗೈಯ್ಯುತ್ತಿದ್ದು ಗೋಲ್ಡನ್ ಜುಬಿಲಿಯ ವೈವಿಧ್ಯಮಯ ಕಾರ್ಯಕ್ರಮಗಳು ಒಂದು ವರ್ಷ ಪೂರ್ತಿಯಾಗಿ ನಡೆಯಲಿದೆ. ಮೇ 8ರಂದು ಇಂಡಿಯನ್ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಗೋಲ್ಡನ್ ಜುಬಿಲಿಯ ಘೋಷಣೆ ಮಾಡಲಿದ್ದಾರೆ. ಅದೇ ದಿನ ಎಲ್ಲಾ ರಾಜ್ಯಗಳಲ್ಲಿ enhance india conferenceಗಳು ನಡೆಯಲಿದ್ದು ಕರ್ನಾಟಕ ರಾಜ್ಯ enhance india conference ಮಂಗಳೂರಿನಲ್ಲಿ ನಡೆಯಲಿದೆ.
ಏ. 29, ಎಸ್ಸೆಸ್ಸೆಫ್ 49 ವರ್ಷಗಳು ಪೂರ್ತಿಗೊಳಿಸಿ 50ನೇ ವರ್ಷಕ್ಕೆ ಪಾದಾರ್ಪಣೆಗೊಂಡಿದೆ. ರಾಷ್ಟ್ರಾದ್ಯಂತ ಯುನಿಟ್ ಕೇಂದ್ರಗಳಲ್ಲಿ ಎಸ್ಸೆಸ್ಸೆಫ್ ಡೇ ಆಚರಣೆ ನಡೆದಿದ್ದು ಗಾಂಧಿನಗರ ಯುನಿಟ್ ನ ಎಸ್ಸೆಸ್ಸೆಫ್ ಡೇ ಆಚರಣೆ ಸುನ್ನಿ ಸೆಂಟರ್ ವಠಾರದಲ್ಲಿ ನಡೆಯಿತು. ಎಸ್.ವೈ.ಎಸ್ ಸುಳ್ಯ ಬ್ರಾಂಚ್ ಅಧ್ಯಕ್ಷ ಸಿದ್ದೀಖ್ ಕಟ್ಟೆಕಾರ್ ಧ್ವಜಾರೋಹಣಗೈದರು. ಎಸ್.ಎಂ.ಎ ಸುಳ್ಯ ರೀಜನಲ್ ಪ್ರ. ಕಾರ್ಯದರ್ಶಿ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಸಂದೇಶ ಭಾಷಣಗೈದರು. ಇದೇ ಸಂದರ್ಭ 52 ಕುಟುಂಬಗಳಿಗೆ ಈದ್ ಗಿಫ್ಟ್ ಹಸ್ತಾಂತರಿಸಲಾಯಿತು.
ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಪ್ರ. ಕಾರ್ಯದರ್ಶಿ ಸಬಾಹ್ ಹಿಮಮಿ ಸಖಾಫಿ ಬೀಜಕೊಚ್ಚಿ, ಕೋಶಾಧಿಕಾರಿ ನೌಶಾದ್ ಕೆರೆಮೂಲೆ, ಮೀಡಿಯಾ ಕಾರ್ಯದರ್ಶಿ ಸಿದ್ದೀಖ್ ಬಿ.ಎ, ಮುಹಮ್ಮದ್ ಕಲ್ಲುಮುಟ್ಲು, ಸಿದ್ದೀಖ್ ಅನ್ಸಾರಿಯಾ, ಅಶ್ರಫ್ ಗುರುಂಪು, ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ಅಧ್ಯಕ್ಷ ಬಶೀರ್ ಕಲ್ಲುಮುಟ್ಲು ಮುಂತಾದ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು. ಶಾಖಾಧ್ಯಕ್ಷ ಆಬಿದ್ ಕಲ್ಲುಮುಟ್ಲು ಸ್ವಾಗತಿಸಿ ಶಾಖಾ ಪ್ರ. ಕಾರ್ಯದರ್ಶಿ ಆರಿಫ್ ಬುಶ್ರಾ ವಂದಿಸಿದರು.