ಸುಬ್ರಹ್ಮಣ್ಯದ ಕುಮಾರಧಾರ ಸ್ನಾನ ಘಟ್ಟದಲ್ಲಿ ಎ.28 ರ ಸಂಜೆ ಯಾತ್ರಾರ್ಥಿ ಕುಟುಂಬವೊಂದರ ಚಿನ್ನ ಕಳವಾದ ಘಟನೆ ವರದಿಯಾಗಿದೆ.
ಮೈಸೂರಿನ ಕುಟುಂಬವೊಂದು ಸ್ನಾನ ಘಟ್ಟದಲ್ಲಿ ಸ್ನಾನ ಮಾಡುವಾಗ ಚಿನ್ನ ತುಂಬಿದ ಬ್ಯಾಗ್ ನ್ನು ನದಿ ದಡದಲ್ಲಿ ಇಟ್ಟು ಸ್ನಾನ ಮಾಡಿ ಬರುವಾಗ ಬ್ಯಾಗ್ ನಲ್ಲಿ ಇಟ್ಟಿದ್ದ ಚಿನ್ನ ಕಳವಾಗಿತ್ತೆನ್ನಲಾಗಿದೆ. ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಮೈಸೂರಿನ ಜಗದೀಶ ಎಂ.ಪಿ. ಎಂಬವರು ದೂರು ನೀಡಿದ್ದು ಸುಮಾರು 75 ಗ್ರಾಂ. ಚಿನ್ನ ಕಳವಾಗಿರುವುದಾಗಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.