Breaking News

ಪಂಜ: ಭಜನಾ ತರಬೇತಿ ಸಮಾರೋಪ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಭಜನೆಗೆ ಆದರ್ಶ ಬದುಕು ರೂಪಿಸುವ ಶಕ್ತಿ ಇದೆ : ಒಡಿಯೂರು ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ

“ಮಕ್ಕಳಲ್ಲಿ ಭವ್ಯ ಭಾರತವನ್ನು ನಿರ್ಮಿಸುವ ಶಕ್ತಿ ಇದೆ. ಅದನ್ನು ರೂಪಿಸಲು ಭಜನೆಯು ಪ್ರೇರಣೆಯಾಗುತ್ತದೆ”. ಎಂದು ಶ್ರೀಕ್ಷೇತ್ರ ಒಡಿಯೂರು ಗುರುದೇವದತ್ತ ಸಂಸ್ಥಾನಂ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಅವರು ಶ್ರೀ ಶಾರದಾಂಬ ಭಜನಾ ಮಂಡಳಿ ಪಂಜ,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಸುಳ್ಯ ತಾಲೂಕು ಪಂಜ ವಲಯ, ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್ ಸುಳ್ಯ ತಾಲೂಕು ಇವರ ವತಿಯಿಂದ ಎ.29 ರಂದು ಪಂಜ ಶ್ರೀ ಶಾರದಾಂಬಾ ಭಜನಾ ಮಂದಿರದ ಸಭಾಭವನದಲ್ಲಿ ಜರುಗಿದ 13 ನೇ ವರ್ಷದ ಭಜನಾ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ .ಆಶೀರ್ವಚನ ನೀಡಿದರು.
“ಕುಣಿತ ಭಜನೆಯಿಂದ ಬ್ರೇಕ್ ಡ್ಯಾನ್ಸ್ ಗೆ ಸ್ವಲ್ಪ ಬ್ರೇಕ್ ಬಿದ್ದಿದೆ. ಮನೆಯಲ್ಲಿ ನಡೆಯುವ ಶುಭ ಕಾರ್ಯಕ್ರಮಗಳಲ್ಲಿ ಭಜನಾ ಕಾರ್ಯಕ್ರಮವನ್ನು ಆಯೋಜಿಸಿ. ಆಗ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ. ಶಾಂತಿಯುತ ವಾತಾವರಣ ನಿರ್ಮಾಣಗೊಂಡು ಉತ್ತಮ ರೀತಿಯಿಂದ ಕಾರ್ಯಕ್ರಮ ನಡೆಯುತ್ತದೆ.ಎಂದು ಅವರು ಹೇಳಿದರು”.
ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್ ರಾಜ್ಯ ಕಾರ್ಯದರ್ಶಿ ಜಯರಾಮ ನೆಲ್ಲಿತ್ತಾಯ ರವರು ಮಾತನಾಡಿ
“ಜಾತ್ರೆ , ನೇಮ, ಭಜನೆ, ಧಾರ್ಮಿಕ ಕಾರ್ಯಕ್ರಮಗಳಿಂದ ನಮ್ಮ ಧರ್ಮ ಜಾಗೃತಿಯಾಗುತ್ತದೆ. ಪ್ರಮುಖವಾಗಿ ಮಕ್ಕಳಿಗೆ ಧರ್ಮ ಜಾಗೃತಿ ಕುರಿತು ಅರಿವು ಮೂಡಿಸಲು ಸಾಧ್ಯವಾಗುತ್ತದೆ.”ಎಂದು ಅವರು ಹೇಳಿದರು.


ಭಜನಾ ತರಬೇತಿ ಸಂಚಾಲಕ ಕುಸುಮಾಧರ ಕೆಮ್ಮೂರು ಸಭಾಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಳ್ಯ ತಾಲೂಕು ಯೋಜನಾಧಿಕಾರಿ ನಾಗೇಶ್ ,ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷ‌ ಸಂತೋಷ್ ಜಾಕೆ , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಪಂಜ ವಲಯ ಮೇಲ್ವಿಚಾರಕಿ ಶ್ರೀಮತಿ ಉಷಾ ಕಲ್ಯಾಣಿ ಕೆ ,ಒಡಿಯೂರು ಗ್ರಾಮ ವಿಕಾಸ ಯೋಜನೆಯ ವಲಯ ಮೇಲ್ವಿಚಾರಕಿ ಶ್ರೀಮತಿ ಜಯಶ್ರೀ, ಹಾಗೂ ಭಜನೋತ್ಸವ ಸಮಿತಿ ಅಧ್ಯಕ್ಷ ಪ್ರಕಾಶ್ ಜಾಕೆ , ಕಾರ್ಯದರ್ಶಿ ವಾಚಣ್ಣ ಕೆರೆಮೂಲೆ ,ರಾಜ್ಯ ಭಜನಾ ಪರಿಷತ್ ಅಧ್ಯಕ್ಷ, ಶ್ರೀ ಶಾರದಾಂಬಾ ಭಜನಾ ಮಂಡಳಿ ಅಧ್ಯಕ್ಷ ಬಾಲಕೃಷ್ಣ ಪುತ್ಯ,ಮಹಾಲಿಂಗ ‌ಸಂಪ , ತರಬೇತುದಾರರಾದ ಶ್ರೀಮತಿ ನಳಿನಾಕ್ಷಿ ವಿ ಆಚಾರ್ಯ ಕಲ್ಮಡ್ಕ , ರಮೇಶ್ ಮೆಟ್ಟಿನಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬಾಲಕೃಷ್ಣ ಪುತ್ಯ ಸ್ವಾಗತಿಸಿದರು.ಸೋಮಶೇಖರ ನೇರಳ ನಿರೂಪಿಸಿದರು.ವಾಚಣ್ಣ
ಕೆರೆಮೂಲೆ ವಂದಿಸಿದರು. ಒಟ್ಟು 228 ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು. ಎಲ್ಲಾ ವಿದ್ಯಾರ್ಥಿಗಳಿಗೆ ಗೋಪಾಲಕೃಷ್ಣ ಕುದ್ವರವರು ಶಾಲು ಕೊಡುಗೆಯಾಗಿ ನೀಡಿದರು.ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಂದ ಭಜನೆ ಮತ್ತು ಕುಣಿತ ಭಜನೆ ಪ್ರಾತ್ಯಕ್ಷಿಕೆ ನಡೆಯಿತು.ಭಜನೆ ಪ್ರಾತ್ಯಕ್ಷಿಕೆಯಲ್ಲಿ ಶ್ರೀಮತಿ ನಳಿನಾಕ್ಷಿ ವಿ ಆಚಾರ್ಯ ಕಲ್ಮಡ್ಕ, ವೆಂಕಟ್ರಮಣ ಆಚಾರ್ಯ ಕಲ್ಮಡ್ಕ, ರಮೇಶ್ ಮೆಟ್ಟಿನಡ್ಕ, ಸುಭಾಷ್ ಪಂಜ ಸಹಕರಿಸಿದರು. ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರನ್ನು ಪೂರ್ಣಕುಂಭ ಸ್ವಾಗತಿಸಲಾಯಿತು.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.