ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಇದರ ಸುಳ್ಳ ತಾಲೂಕು ಸಮಿತಿಯ ವಿಶೇಷ ಸಭೆಯು ಏಪ್ರಿಲ್ 29 ರಂದು ಸುಳ್ಯ ವರ್ತಕರ ಭವನದಲ್ಲಿ ನಡೆಯಿತು, ಸಭೆಯ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷರಾದ ಶಿವಪ್ರಕಾಶ್ ಆಡ್ಪಂಗಾಯ ವಹಿಸಿದ್ದರು.
ಮೇ 1 ರ ಜಿಲ್ಲಾ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸುವುದು, ಗ್ರಾಮ ಸಮಿತಿಯ ರಚನೆ, ಹಾಗೂ ರಕ್ತಧಾನ ರಕ್ತ ವರ್ಗೀಕರಣ ಶಿಬಿರದ ಆಯೋಜನೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಸಮಿತಿಯ ಗೌರವಾಧ್ಯಕ್ಷರಾದ ಪಿ.ಬಿ ಸುಧಾಕರ ರೈ ಸಭೆಯನ್ನು ಉದ್ದೇಶಿಸಿ ಮಾತನಾಡಿದರು, ಸಮಿತಿಯ ಗೌರವ ಸಲಹೆಗಾರರಲ್ಲಿ ಓರ್ವರಾದ ಪದ್ಮನಾಭ ಗುರುಸ್ವಾಮಿ ವೇಧಿಕೆಯಲ್ಲಿ ಉಪಸ್ಥಿತರಿದ್ದರು, ಪ್ರಧಾನ ಕಾರ್ಯದರ್ಶಿ ಸುರೇಶ್ ಕಣೆಮರಡ್ಕ ಸ್ವಾಗತಿಸಿ ವಂದಿಸಿದರು, ಜಯಪ್ರಕಾಶ್ ಕಜ್ಜೋಡಿ, ಮೋಹನದಾಸ ಜಿ.ಎಸ್ , ಸುರೇಶ್ ಗುತ್ತಿಗಾರು, ಮಹೇಶ್ ಕುಮಾರ್ ಮೇನಾಲ, ಹಿಮಕರ ಗುಡ್ಲ, ಶ್ರೀಮತಿ ಗಂಗಾವತಿ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು,