ಬೆಳ್ಳಾರೆ ಝಖರಿಯ್ಯಾ ಜುಮಾ ಮಸೀದಿಯಲ್ಲಿ ಪವಿತ್ರ ರಂಝಾನ್ ತಿಂಗಳ ಎಲ್ಲಾ ದಿವಸವು ಇಫ್ತಾರ್ ಕೂಟವು ವಿಜ್ರಂಭಣೆಯಿಂದ ನಡೆಯುತ್ತಿದೆ. ಜಮಾಅತರ ಹಾಗೂ ದಾನಿಗಳ ಸಹಕಾರದಿಂದ ಇಫ್ತಾರ್ ಕೂಟ ಏರ್ಪಡಿಸಲಾಗುತ್ತಿದೆ. ಜಮಾಅತ್ ಆಡಳಿತಾಧಿಕಾರಿ ಜನಾಬ್ ಮುಹಮ್ಮದ್ ರಫಿ ರವರ ನಿರ್ದೇಶನದಲ್ಲಿ ಆಶಿರ್ ಎ.ಬಿ ಹಾಗೂ ಅತ್ತಾವುಲ್ಲಾ ರವರ ಉಸ್ತುವಾರಿಯಲ್ಲಿ ಜಮಾಅತಿನ ಯುವಕರ ಸಹಕಾರದೊಂದಿಗೆ ನಡೆಯುವ ಇಫ್ತಾರ್ ಕೂಟದಲ್ಲಿ ಊರ, ಪರವೂರಿನ ನೂರಾರು ಜನರು ಪ್ರತಿ ದಿನವೂ ಭಾಗವಹಿಸುತ್ತಿದ್ದಾರೆ.