ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ.ರೇಣುಕಾಪ್ರಸಾದ್ ಕೆ.ವಿ. ಯವರಿಗೆ ಅಭಿನಂದನೆ
ಎಂ.ಜಿ.ಎಂ. ಶಾಲೆಯ ಮುಖ್ಯಗುರು ಕೆ.ಚಿದಾನಂದರಿಗೆ ಗೌರವಾರ್ಪಣೆ
ಗೌಡರ ಯುವ ಸೇವಾ ಸಂಘ ಸುಳ್ಯ, ಮಹಿಳಾ ಘಟಕ ಮತ್ತು ತರುಣ ಘಟಕ ಮತ್ತು ಗ್ರಾಮ ಸಮಿತಿಗಳ ವಾರ್ಷಿಕ ಸಮಾವೇಶ ಹಾಗೂ ಸನ್ಮಾನ ಸಮಾರಂಭ ಸುಳ್ಯದ ಕೊಡಿಯಾಲಬೈಲಿನ ಗೌಡರ ಸಮುದಾಯ ಭವನದಲ್ಲಿ ನಡೆಯಿತು.
ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಚಂದ್ರಾಕೋಲ್ಚಾರ್ ರ ಅಧ್ಯಕ್ಷ ತೆಯಲ್ಲಿ ನಡೆದ ಕಾರ್ಯಕ್ರಮವನ್ನು ಪುತ್ತೂರು ಶಾಸಕ ಸಂಜೀವ ಮಠಂದೂರು ಸಮಾವೇಶ ಉದ್ಘಾಟಿಸಿದರು.
ಅಭಿನಂದನೆ : ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ರಾಗಿ ಆಯ್ಕೆಯಾದ ಡಾ.ರೇಣುಕಾಪ್ರಸಾದ್ ಕೆ.ವಿ.ಯವರನ್ನು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಎನ್. ಬಾಲಕೃಷ್ಣ ರು ಅಭಿನಂದಿಸಿದರು.
ಎಂ.ಜಿ.ಎಂ. ಶಾಲೆಯಲ್ಲಿ 21 ವರ್ಷಗಳ ಕಾಲ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿದ್ದ ಕೆ.ಚಿದಾನಂದ ರನ್ನು ಗೌರವಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇ ಗೌಡ ಮುಖ್ಯ ಅತಿಥಿಗಳಾಗಿದ್ದರು. ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಆಂಜನಪ್ಪ, ಜತೆ ಕಾರ್ಯದರ್ಶಿ ರಾಘವೇಂದ್ರ ಮಂಡ್ಯ, ನಿರ್ದೇಶಕ ಮಂಜೇಗೌಡ ಮೈಸೂರು, ಸುಳ್ಯ ಎಂ.ಜಿ.ಎಂ. ಶಾಲೆಯ ಸಂಚಾಲಕ ದೊಡ್ಡಣ್ಣ ಬರೆಮೇಲು, ಸುಳ್ಯ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಪಿ.ಸಿ. ಜಯರಾಮ, ಗೌಡ ಸಮುದಾಯ ಭವನ ಕಟ್ಟಡದ ನಿರ್ಮಾಣ ಸಮಿತಿ ಅಧ್ಯಕ್ಷ ಎ.ವಿ. ತೀರ್ಥರಾಮ, ಗೌಡ ಸಂಘದ ಪ್ರಧಾನ ಕಾರ್ಯದರ್ಶಿ ಬೆಳ್ಯಪ್ಪ ಗೌಡ ಬಳ್ಳಡ್ಕ, ಕೋಶಾಧಿಕಾರಿ ಚಂದ್ರಶೇಖರ ಮೇರ್ಕಜೆ, ಉಪಾಧ್ಯಕ್ಷರುಗಳಾದ ದಾಮೋದರ ನಾರ್ಕೋಡು, ಸದಾನಂದ ಮಾವಜಿ, ಕೂಸಪ್ಪ ಗೌಡ ಮುಗುಪ್ಪು, ಕಾರ್ಯದರ್ಶಿಗಳಾದ ಡಾ.ಪುರುಷೋತ್ತಮ ಕೆ.ಜಿ., ದಿನೇಶ್ ಮಡ್ತಿಲ, ವೀರಪ್ಪ ಗೌಡ ಕಣ್ಕಲ್, ಕೆ.ಎಂ. ಬಿ. ಉಮೇಶ್, ಮಹಿಳಾ ಘಟಕ ಅಧ್ಯಕ್ಷೆ ಶ್ರೀಮತಿ ಪುಷ್ಪಾವತಿ ಮಾಣಿಬೆಟ್ಟು, ಶ್ರೀಮತಿ ಚಂಚಲಾಕ್ಷಿ ಕತ್ಲಡ್ಕ, ತರುಣ ಘಟಕ ಅಧ್ಯಕ್ಷ ರಜತ್ ಗೌಡ ಅಡ್ಕಾರ್ ಉಪಸ್ಥಿತರಿದ್ದರು.
ಶಿಕ್ಷಕಿ ಶ್ರೀಮತಿ ಪೂರ್ಣಿಮಾ ಮಡಪ್ಪಾಡಿ ಪ್ರಾರ್ಥಿಸಿದರು.
ಕಾರ್ಯಕ್ರಮದ ಸಂಚಾಲಕ ಪಿ.ಎಸ್. ಗಂಗಾಧರ್ ಸ್ವಾಗತಿಸಿದರು. ಗೌಡರ ಯುವ ಸೇವಾ ಸಂಘದ ಮಾಜಿ ಅಧ್ಯಕ್ಷ ದಿನೇಶ್ ಮಡಪ್ಪಾಡಿ ಪ್ರಾಸ್ತಾವಿಕ ಮಾತನಾಡಿದರು. ಕೆ.ಟಿ. ವಿಶ್ವನಾಥ್ ಕಾರ್ಯಕ್ರಮ ನಿರೂಪಿಸಿದರು.