ಸುಬ್ರಹ್ಮಣ್ಯ ಠಾಣೆಯ ಎ ಎಸ್ ಐ ಕಾಂತು ಹೆಚ್ . ಎನ್ . ಇಂದು ಸೇವಾ ನಿವೃತ್ತಿ ಹೊಂದಿದರು.
1993 ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡು ಕಾಸ್ಟೇಬಲ್ ಆಗಿ ವಿಟ್ಲ ಪೊಲೀಸ್ ಠಾಣೆ , ಪುತ್ತೂರು ನಗರ , ಸುಬ್ರಹ್ಮಣ್ಯ ಠಾಣೆ , ಮುಖ್ಯ ಆರಕ್ಷಕರಾಗಿ ಮಂಗಳೂರು ಅಬಕಾರಿ ಮತ್ತು ಲಾಟರಿ ನಿಷೇದ ದಳ , ಪುಂಜಾಲಕಟ್ಟೆ ಪೊಲೀಸ್ ಠಾಣೆ , ಸಹಾಯಕ ಪೊಲೀಸ್ ಉಪನಿರೀಕ್ಷಕರಾಗಿ ಭಡ್ತಿಗೊಂಡು ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ 2 ನೇ ಬಾರಿಗೆ ಕರ್ತವ್ಯ ನಿರ್ವಹಿಸಿದ್ದು , 28 ವರ್ಷ, 11 ತಿಂಗಳು ಕರ್ತವ್ಯ ನಿರ್ವಹಿಸಿದ್ದಾರೆ.
ಶ್ರೀಯುತರು ಪ್ರಾಥಮಿಕ ವಿದ್ಯಾಭ್ಯಾಸವನ್ನು ವಿರಾಜ ಪೇಟೆ ತಾಲೂಕು ನಾಲ್ಕೆರಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂರೈಸಿ, ಹೈಸ್ಕೂಲು ಮತ್ತು ಪದವೀ ಪೂರ್ವ ವಿದ್ಯಾಭ್ಯಾಸವನ್ನು ಜೂನಿಯರ್ ಕಾಲೇಜು ವಿರಾಜ ಪೇಟೆ ಶ್ರೀಮಂಗಲದಲ್ಲೂ, ಪದವಿಯನ್ನು ಉಡುಪಿ ಎಂ.ಜಿ.ಎಂ ಕಾಲೇಜಿನಲ್ಲೂ ಪೂರೈಸಿರುತ್ತಾರೆ .
ಇವರ ಪತ್ನಿ ಧರಣಿ ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ . ಪುತ್ರ ಭರತ್ , ಮಂಗಳೂರು ಸೆಂಟ್ ಆಗ್ನೆಸ್ ಪದವೀ ಕಾಲೇಜಿನಲ್ಲಿ ಉಪನ್ಯಾಸಕರಾಗಿಯೂ , ಶರತ್ , ನಿಟ್ಟೆ ಯುನಿವರ್ಸಿಟಿ ಕಾಲೇಜಿನಲ್ಲಿ ಉಪನ್ಯಾಸಕರಾಗಿಯೂ ಕೆಲಸ ನಿರ್ವಹಿಸುತ್ತಿದ್ದಾರೆ .
ಇಂದು ಮಂಗಳೂರಿನಲ್ಲಿ ಮಂಗಳೂರಿನಲ್ಲಿ ಎಸ್ ಪಿ ಕಛೇರಿಯಲ್ಲಿ ಹೃಷಿಕೇಶ್ ಭಗವಾನ್ ಸೋನಾವಾಣೆ ಕಾಂತು ಅವರನ್ನು ಗೌರವಿಸಿ ಬೀಳ್ಕೊಟ್ಟರು. ಸುಬ್ರಹ್ಮಣ್ಯ ಎಸ್ ಐ ಜಂಬುರಾಜ್ ಮಾಹಾಜನ್ ಉಪಸ್ಥಿತರಿದ್ದರು.