ಹರಿಹರ ಗ್ರಾ.ಪಂ ಮತ್ತು ಹರಿಹರ ಪ್ರೌಢಶಾಲಾ ಶಾಲಾಭಿವೃದ್ಧಿ ಸಮಿತಿ ವತಿಯಿಂದ ಸ್ಥಳೀಯ ಪ್ರಾಥಮಿಕ ಶಾಲಾ ಏಳನೇ ತರಗತಿಯ ಮಕ್ಕಳ ಪೋಷಕರ ಭೇಟಿ ಕಾರ್ಯಕ್ರಮ ಎ. ೨೯ ರಂದು ನಡೆಯಿತು.
ವಿದ್ಯಾರ್ಥಿಗಳ ಮನೆಗೆ ತೆರಳಿ ಪ್ರೌಢಶಾಲಾ ಶಿಕ್ಷಣವನ್ನು ಹರಿಹರದಲ್ಲೇ ಕೊಡಿಸುವಂತೆ ಕೇಳಿಕೊಳ್ಳಲಾಗಿದೆ. ಹರಿಹರ ಪ್ರೌಢಶಾಲೆಯಲ್ಲಿ ಪೂರ್ಣ ಪ್ರಮಾಣದ ಶಿಕ್ಷಕ ವರ್ಗವಿದ್ದು ಉತ್ತಮ ಶೈಕ್ಷಣಿಕ ವ್ಯವಸ್ಥೆ ಇರುವುದಾಗಿ ಪೋಷಕರಿಗೆ ತಿಳಿ ಹೇಳಲಾಗಿದೆ. ಹರಿಹರ ಪಲ್ಲತ್ತಡ್ಕ ಗ್ರಾ.ಪ ಪಿ.ಡಿ.ಒ
ಮಣಿಯಾನ ಮನೆ ಪುರುಷೊತ್ತಮ ಗೌಡ,
ಗ್ರಾ.ಪಂ ಅಧ್ಯಕ್ಷ ಜಯಂತ ಬಾಳುಗೋಡು, ಉಪಾಧ್ಯಕ್ಷ ವಿಜಯ ಅಂಙಣ, ಸದಸ್ಯರುಗಳಾದ ಶಿಲ್ಪಾ ಕೊತ್ನಡ್ಕ, ಬಿಂದು ಪಿ ಗುಂಡಿಹಿತ್ಲು,
ಸ.ಪ.ಪೂ.ಕಾಲೇಜು ಫ್ರೌ .ಶಾ.ವಿಭಾಗದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು ಲವ ಮಲ್ಲಾರ ಸದಸ್ಯರಾದ ಉಮೇಶ ಕೊಪ್ಪತ್ತಡ್ಕ, ಸಾವಿತ್ರಿ. ಕೆ, ಶಿಕ್ಷಕರು ಮೇದಪ್ಪ .ಎ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.