ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಜ್ಞಾನದೀಪ ಆಸರೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಶಿಕ್ಷಣದ ಪ್ರಮುಖ ಘಟ್ಟವಾದ ಪಿಯುಸಿ ಮತ್ತು ಎಸ್.ಎಸ್.ಎಲ್.ಸಿಯಲ್ಲಿ ಅನುತ್ತೀರ್ಣರಾಗುವ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯ ಕನಸು ಕಮರಿ ಹೋಗುತ್ತೆ. ಅದರಲ್ಲೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಅನುತ್ತೀರ್ಣತೆ ಕಪ್ಪು ಚುಕ್ಕೆಯಾಗಿ ಪರಿಣಮಿಸುತ್ತದೆ. ಆದರೆ ಬೆಳ್ಳಾರೆ ಮತ್ತು ಸುಳ್ಯದಲ್ಲಿ ಕಾಂiiನಿರ್ವಹಿಸುತ್ತಿರುವ ಜ್ಞಾನದೀಪ ಶಿಕ್ಷಣ ಸಂಸ್ಥೆ ಅನುತ್ತೀರ್ಣ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಆಶಾಕಿರಣವಾಗಿ ಮಿಂಚುತ್ತಿದೆ. ಹಿಂದಿನ ತರಗತಿಯಲ್ಲಿ ಅನುತ್ತೀರ್ಣಗೊಂಡ ಅಥವಾ ಓದು ನಿಲ್ಲಿಸಿ ಖಾಸಗಿಯಾಗಿ ಎಸ್.ಎಸ್.ಎಲ್.ಸಿ, ಪಿಯುಸಿ ಪರೀಕ್ಷೆ ಬರೆದು ಶಿಕ್ಷಣವನ್ನು ಮುಂದುವರಿಸುವ ಅವಕಾಶವನ್ನು ಶಿಕ್ಷಣ ಇಲಾಖೆ ನೀಡಿದೆ. ಇಂತಹ ಅವಕಾಶವನ್ನು ಉಪಯೋಗಿಸಿಕೊಂಡು ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಹೊಸ ದಾರಿಯನ್ನು ತೋರಿಸಿಕೊಡುವ ಜ್ಞಾನದೀಪ ಶಿಕ್ಷಣ ಸಂಸ್ಥೆಯಲ್ಲಿ ಪ್ರಥಮ ಪಿಯುಸಿಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳು ಅಥವಾ ೧೦ನೇ ತರಗತಿ ಪಾಸಾದವರು ದ್ವಿತೀಯ ಪಿಯುಸಿ ವಾಣಿಜ್ಯ ಅಥವಾ ಕಲಾ ವಿಭಾಗಕ್ಕೆ ಹಾಗೂ ೭,೮,೯ನೇ ತರಗತಿಯಲ್ಲಿ ಅನುತ್ತೀರ್ಣರಾದವರಿಗೆ ನೇರವಾಗಿ ಎಸ್.ಎಸ್.ಎಲ್.ಸಿ, ತರಗತಿಗೆ ಸೇರ್ಪಡೆ ಮಾಡಲಾಗುತ್ತಿದೆ.
ಅನುತ್ತೀರ್ಣ ವಿದ್ಯಾರ್ಥಿಗಳ ಪಾಲಿಗೆ ಆಶಾದಾಯಕವಾಗಿರುವ ಜ್ಞಾನದೀಪ ಸಾಧನೆಯ ಬೆಳಕಿನಲ್ಲಿ ಶೋಭಿಸುತ್ತಿದೆ. ತನ್ನ ಹೊಸ ಯೋಚನೆ, ಹೊಸ ಯೊಜನೆ, ವಿಶಿಷ್ಟ ಕಾರ್ಯ ಚಟುವಟಿಕೆಗಳಿಂದ ಗ್ರಾಮೀಣ ಪ್ರದೇಶದಲ್ಲಿ ಬಲವಾದ ಹೆಜ್ಜೆ ಊರಿದ ಈ ಸಂಸ್ಥೆ ತನ್ನ ಪಥದಲ್ಲಿ ಅನೇಕ ಜೀವನಪರ ಮೈಲಿಗಲ್ಲುಗಳನ್ನು ನೆಟ್ಟಿದೆ. ಗ್ರಾಮೀಣರ. ಬಡವರ, ಪಾಲಿಗೆ ವರದಾನವಾಗಿರುವ ಈ ಸಂಸ್ಥೆ ವಿದ್ಯಾರ್ಥಿಗಳ ಬಾಳಿಗೆ ಹೊಸ ಸ್ವರೂಪ ನೀಡುತ್ತಿದೆ
ಪ್ರಾಮಾಣಿಕ ಫಲಿತಾಂಶ
ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳಿಗೂ ಅತ್ಯುತ್ತಮ ಅಂಕಗಳಿಸುವ ಸಾಮರ್ಥ್ಯವಿದೆ ಎಂಬುವುದನ್ನು ಮನದಟ್ಟು ಮಾಡಿ ಕಲಿಸುವ ಇಲ್ಲಿನ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಕಲಿಯುವ ಹಠವನ್ನು ಹುಟ್ಟಿಸುತ್ತಾರೆ. ಪ್ರತಿವರ್ಷ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗುತ್ತಿರುವುದು ಇದಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಕಳೆದ ೧೪ ವರ್ಷಗಳಿಂದ ಸಂಸ್ಥೆ ಪ್ರಾಮಾಣಿಕ ಫಲಿತಾಂಶವನ್ನು ನೀಡುತ್ತಾ ಬಂದಿದೆ.

ರೆಗ್ಯುಲರ್ ತರಗತಿಗಳಲ್ಲದೆ ಕಂಪ್ಯೂಟರ್ ತರಬೇತಿ, ನವೋದಯ ತರಬೇತಿ, ಎನ್.ಟಿ.ಟಿ.ಸಿ ತರಬೇತಿ ಮೊದಲಾದ ತರಬೇತಿಗಳನ್ನು ಸಂಸ್ಥೆ ಸಂಘಟಿಸುತ್ತಿದೆ. ಪ್ರತಿವರ್ಷವೂ ಜ್ಞಾನದಿಪದಲ್ಲಿ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ ನಡೆಯುತ್ತದೆ. ಹೆತ್ತವರ ಸಮಾಲೋಚನಾ ಸಭೆಗಳು ನಿರಂತರವಾಗಿ ನಡೆಯುತ್ತದೆ. ಜಗತ್ತಿಗೆ ಜ್ಞಾನದೀಪದ ಮಾಹಿತಿ ನೀಡಬಲ್ಲ ವೆಬ್‌ಸೈಟ್ ಹೊಂದಿರುವ ಜ್ಞನದೀಪ ಹೊರದೇಶದಲ್ಲಿ ಉದ್ಯೋಗ ಪಡೆದು ಬದುಕು ಕಟ್ಟಿಕೊಂಡ ತನ್ನ ಹಳೆ ವಿದ್ಯಾರ್ಥಿಗಳಿಗೆ ಸಂಸ್ಥೆಯ ಮಾಹಿತಿ ತಲುಪಿಸುವ ಕಾರ್‍ಯ ಮಾಡಿದೆ.
೧೪ವರ್ಷಗಳ ಶೈಕ್ಷಣಿಕ ಸೇವೆ
ಅನುತ್ತೀರ್ಣ ಹಾಗೂ ಓದು ನಿಲ್ಲಿಸಿದ ವಿದ್ಯಾಥಿಗಳಿಗಾಗಿ ಶಾಲಾ ಕಾಲೇಜು ಮಾದರಿ ಶಿಕ್ಷಣ ಸಂಸ್ಥೆಯನ್ನು ೨೦೦೮ರಲ್ಲಿ ಆರಂಭಿಸಿದ ಜ್ಞಾನದೀಪ ಗುಣಮಟ್ಟದ ಫಲಿತಾಂಶ ಭರಿತ ಶಿಕ್ಷಣದೊಂದಿಗೆ ೧೪ ವರ್ಷಗಳನ್ನು ಪೂರೈಸಿದೆ. ಫಲಿತಾಂಶದಲ್ಲಿ ಪ್ರಾಮಾಣಿಕತೆಯನ್ನು ಕಾಯ್ದುಕೊಂಡು ಮುನ್ನಡೆಯುತ್ತಿರುವ ಸುಳ್ಯ ಮತ್ತು ಬೆಳ್ಳಾರೆಯ ಜ್ಞಾನದೀಪ ೧೫ನೇ ವರ್ಷಕ್ಕೆ ಕಾಲಿರಿಸಿದೆ.

 

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.