ಅಮರಪಡ್ನೂರು ಶಾಲೆಗೆ ಶೌಚಾಲಯ ನಿರ್ಮಾಣ ಮತ್ತು ದುರಸ್ತಿ ಕಾರ್ಯ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಅಮರಪಡ್ನೂರು ಸ.ಉ‌.ಹಿ.ಪ್ರಾ. ಶಾಲೆಗೆ‌ ಮಂಗಳೂರು ಕೆಮಿಕಲ್ಸ್ ಮತ್ತು ಫರ್ಟಿಲೈಸರ್ಸ್ ಸಂಸ್ಥೆಯ ವತಿಯಿಂದ ರೂ. 3.5 ಲಕ್ಷ ವೆಚ್ಚದಲ್ಲಿ ಶೌಚಾಲಯ ನಿರ್ಮಾಣ ಮತ್ತು ಶೌಚಾಲಯ ದುರಸ್ತಿ ಕಾರ್ಯ ಹಮ್ಮಿಕೊಳ್ಳಲಾಯಿತು.
ನೂತನವಾಗಿ ನಿರ್ಮಿಸಲಾದ ಶೌಚಾಲಯವನ್ನು ನಿವೃತ್ತ ವಿದ್ಯಾಂಗ ಉಪನಿರ್ದೇಶಕಿ ಶ್ರೀಮತಿ ಶೀಲಾವತಿ ಕೊಳಂಬೆ ಯವರು ಉದ್ಘಾಟಿಸಿದರು.
ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ರವರ ಶಿಫಾರಸ್ಸಿನ ಮೇರೆಗೆ ಎಂ.ಸಿ.ಎಫ್ ಸಂಸ್ಥೆಯ ನಿವೃತ್ತ ಜನರಲ್ ಮ್ಯಾನೇಜರ್ ಬಿ. ಕೃಷ್ಣಪ್ಪ ಮತ್ತು ಶ್ರೀಮತಿ ಬಿ.ಕೆ. ಭಾರತಿ ದಂಪತಿ, ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಈಶ್ವರ ಕಾಯರ, ಜಿ.ಪಂ.ಮಾಜಿ ಸದಸ್ಯ ಎಸ್.ಎನ್.ಮನ್ಮಥ , ಪಂ.ಸದಸ್ಯ ರಾಧಾಕೃಷ್ಣ ಕೊರತ್ಯಡ್ಕ ರವರು ನೇತೃತ್ವದಲ್ಲಿ ಶೌಚಾಲಯ ನಿರ್ಮಾಣ ಕಾರ್ಯ ಮಾಡಲಾಗಿತ್ತು. ವೇದಿಕೆಯಲ್ಲಿ ಕೆ.ವಿ.ಜಿ.ಪಾಲಿಟೆಕ್ನಿಕ್ ನಿವೃತ್ತ ಪ್ರಾಂಶುಪಾಲ ಬಾಲಕೃಷ್ಣ ಬೊಳ್ಳೂರು, ಚೊಕ್ಕಾಡಿ ಸೊಸೈಟಿ ಉಪಾಧ್ಯಕ್ಷ ಕೇಶವ ಕರ್ಮಾಜೆ, ಮಾಜಿ ಉಪಾಧ್ಯಕ್ಷ ಜನಾರ್ದನ ಚೂಂತಾರು, ಧರ್ಮಸ್ಥಳ ಯೋಜನೆ ಒಕ್ಕೂಟದ ಅಧ್ಯಕ್ಷ ಪ್ರಸಾದ್ ಕೋಟೆಬನ, ಶೇಣಿ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಮಾಧವ ಪಿಂಡಿಬನ, ಎಸ್.ಡಿ.ಎಂ.ಸಿ.ಉಪಾಧ್ಯಕ್ಷೆ ಗೀತಾ, ದಿನೇಶ್ ಕೊರತ್ಯಡ್ಕ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ರಮಾಕಿಶೋರಿ ಕೆ.ಸ್ವಾಗತಿಸಿ, ವಂದಿಸಿದರು. ಶಾಲಾ ಶಿಕ್ಷಕರು, ಪೋಷಕರು,ಎಸ್.ಡಿ.ಎಂ.ಸಿ.ಸದಸ್ಯರು ,ವಿದ್ಯಾರ್ಥಿಗಳು ಭಾಗವಹಿಸಿದರು.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.