ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿ ಸೇವೆಗೈಯುತ್ತಿದ್ದ ಕೆ ಸುಬ್ರಮಣ್ಯ ಜೋಷಿ ರವರು ಎ.30 ರಂದು ನಿವೃತ್ತರಾಗಿದ್ದಾರೆ. ಅವರು ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 40 ವರ್ಷಗಳ ಕಾಲ ಸಿಬ್ಬಂದಿಯಾಗಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಲ್ಮಡ್ಕ ಗ್ರಾಮದ ಬೊಮ್ಮೆಟ್ಟಿ,- ಕರುವಜೆ ಮನೆಯ ದಿ.ವೆಂಕಟ್ರಮಣ ಜೋಯಿಸ ಮತ್ತು ಶ್ರೀಮತಿ ಸಾವಿತ್ರಿ ದಂಪತಿಗಳ ಪುತ್ರರಾದ ಜೋಷಿಯವರು,29-7-1982ರಲ್ಲಿ ಸಂಘಕ್ಕೆ ನೌಕರನಾಗಿ ಸೇರ್ಪಡೆ ಗೊಂಡರು. ಗುಮಾಸ್ತರಾಗಿ ಸೇವೆಯನ್ನು ಆರಂಭಿಸಿದ ಇವರು , ವ್ಯವಸ್ಥಾಪಕರಾಗಿ, ತದನಂತರ 1-8 -2014 ರಿಂದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ.ಇವರ ತಾಯಿ ಶ್ರೀಮತಿ ಸಾವಿತ್ರಿ ಕೆ, ಪತ್ನಿ ಶ್ರೀಮತಿ ಜಯಲಕ್ಷ್ಮಿ ಕೆ. ಇವರ ಪುತ್ರ ಕೀರ್ತನ್ ಎಸ್ ಜೆ ಬೆಂಗಳೂರು ಬಾಷ್ ಕಂಪನಿಯಲ್ಲಿ ಸೀನಿಯರ್ ಮೆಕಾನಿಕಲ್ ಇಂಜಿನಿಯರ್ ಆಗಿದ್ದಾರೆ. ಎರಡನೇ ಪುತ್ರ ಕಿಶನ್ ಎಸ್ ಜೆ ಮೈಸೂರಿನಲ್ಲಿ ಇನ್ಫೋಸಿಸ್ ಸಂಸ್ಥೆಯ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದಾರೆ.ಇವರ ಸೊಸೆ ಶ್ರೀಮತಿ ಶರ್ಮಿಳಾ ಕೀರ್ತನ್ ಬೆಂಗಳೂರು ಬಾಷ್ ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದಾರೆ.