ಕಲ್ಮಡ್ಕ : ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ ಸುಬ್ರಹ್ಮಣ್ಯ ಜೋಷಿ ಯವರಿಗೆ ನಿವೃತ್ತಿ- ಬೀಳ್ಕೊಡುಗೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 40 ವರ್ಷ ವಿವಿಧ ಹುದ್ದೆಗಳಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಮುಖ್ಯಕಾರ್ಯನಿರ್ವಾಹಣಾಧಿಕಾರಿಯಾಗಿ ನಿವೃತ್ತಿ ಹೊಂದಿದ ಕೆ ಸುಬ್ರಹ್ಮಣ್ಯ ಜೋಷಿ ಯವರಿಗೆ ಸಂಘದ ವತಿಯಿಂದ ಬೀಳ್ಕೊಡುಗೆ ಮತ್ತು ಸನ್ಮಾನ ಸಮಾರಂಭ ಜರಗಿತು.

s
ಸಂಘದ ಅಧ್ಯಕ್ಷ ಪಿ ಉದಯ ಕುಮಾರ್ ಬೆಟ್ಟ ರವರು ಅಧ್ಯಕ್ಷತೆ ವಹಿಸಿ ಮಾತನಾಡಿ “ಸುಬ್ರಹ್ಮಣ್ಯ ಜೋಷಿ ಯವರು ಸಂಘದಲ್ಲಿ ಅವರ ಕರ್ತವ್ಯವನ್ನು ಉತ್ತಮವಾಗಿ ಜವಾಬ್ದಾರಿಯುತವಾಗಿ ಮಾಡಿದ್ದಾರೆ.ಸಂಘದ ಅಭಿವೃದ್ಧಿಯಲ್ಲಿ ಅವರ ಕೊಡುಗೆ ಇದೆ.ಅವರ ನಿವೃತ್ತ ಜೀವನ ಸುಖ ಶಾಂತಿ ನೆಮ್ಮದಿಯಿಂದ ಕೂಡಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ” ಎಂದು ಹೇಳಿದರು.
.ಸಂಘದ ಉಪಾಧ್ಯಕ್ಷ ಲಕ್ಷ್ಮೀನಾರಾಯಣ ಎನ್ ಜಿ ಮಾತನಾಡಿ “ಸುಬ್ರಹ್ಮಣ್ಯ ಜೋಷಿಯವರು ಸಂಘದಲ್ಲಿ 40 ವರ್ಷ‌ ಸುದೀರ್ಘ ಅವಧಿ‌ಯಲ್ಲಿ ಕೆಲಸ ಮಾಡಿದ್ದಾರೆ.ಜೊತೆಗೆ ಸ್ಥಳೀಯ ಕಾರ್ಯಕ್ರಮಗಳಲ್ಲಿ, ಸಂಘಟನೆಗಳಲ್ಲಿ ಮುಂದೆ ನಿಂತು ಕೆಲಸ ಮಾಡಿದವರು.”ಎಂದು ಹೇಳಿದರು.

ಸಂಘದ ನಿರ್ದೇಶಕ ಮಹಾಬಲ ಕೆ ಮಾತನಾಡಿ .
“ಕಲ್ಮಡ್ಕ ಸಹಕಾರ ಸಂಘದ ಪ್ರತಿಯೊಬ್ಬ ಸದಸ್ಯನ ನಾಡಿ ಮಿಡಿತವನ್ನು ಬಹಳ ಚೆನ್ನಾಗಿ ಬಲ್ಲವರು ಸುಬ್ರಹ್ಮಣ್ಯ ಜೋಷಿ. ಸಂಘದಲ್ಲಿ ಎಲ್ಲಾ ಕೆಲಸಗಳನ್ನು ಉತ್ತಮವಾಗಿ ಮಾಡಿದ್ದಾರೆ. ಯಾವುದೇ ಕೆಲಸವನ್ನು ಮಾಡುವಾಗ ಸೂಕ್ಷ್ಮವಾಗಿ ಮಾಡುವ ಚಾಣಾಕ್ಷತನ ಹೊಂದಿದವರು .ಅವರ ಮುಂದಿನ ಜೀವನ ಸುಖ ‌ಶಾಂತಿ ನೆಮ್ಮದಿಯಿಂದ , ಅವರಿಗೆ ಎಲ್ಲ ರೀತಿಯ ಸುಯೋಗವನ್ನು ದೇವರು ಕರುಣಿಸಲಿ ‌ಎಂದು ಪ್ರಾರ್ಥಿಸುತ್ತೇನೆ.” ಎಂದು ಹೇಳಿದರು.

ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ ಸುಬ್ರಹ್ಮಣ್ಯ ಜೋಷಿ ಮತ್ತು ಅವರ
ಪತ್ನಿ ಶ್ರೀಮತಿ ಜಯಲಕ್ಷ್ಮಿ ಕೆ , ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ
ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ ಸುಬ್ರಹ್ಮಣ್ಯ ಜೋಷಿ ಮತ್ತು ಅವರ
ಪತ್ನಿ ಶ್ರೀಮತಿ ಜಯಲಕ್ಷ್ಮಿ ಕೆ ರವರನ್ನು ಸನ್ಮಾನಿಸಲಾಯಿತು.
ನಿರ್ದೇಶಕರಾದ ನಾರಾಯಣ ಕೆ ಕೆ, ಶ್ರೀಮತಿ ಸುಧಾ ಎಸ್ ಭಟ್, ಶ್ರೀಮತಿ ಲಲಿತ ಪಿ, ಮಹಮ್ಮದ್ ಹನೀಫ್, ರಾಮ ನಾಯ್ಕ ಯು, ಕರುಣಾಕರ ಜೆ, ಶೇಷಪ್ಪ ಎ ವಿ, ಮೋಹನ ಕೆ , ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಪೂವಕ್ಕ‌
ಪ್ರಾರ್ಥಿಸಿದರು. ಪ್ರಶಾಂತ್ ಜೆ ಸ್ವಾಗತಿಸಿದರು. ಪುನೀತ್ ಮೂಲೆಮನೆ ನಿರೂಪಿಸಿದರು
ಶೇಷಪ್ಪ ರವರು ಸನ್ಮಾನ ಪತ್ರ ವಾಚಿಸಿದರು. ಲಕ್ಷ್ಮೀನಾರಾಯಣ ಎನ್ ಜಿ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.