ದಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕನ್ನಡ ಭವನ ಬಂಟ್ವಾಳ ಇಲ್ಲಿ ಜಿಲ್ಲೆಯ ಹಿರಿಯ ಸಾಹಿತಿ ಟಿ ಜಿ ಮುಡೂರು ಅವರಿಗೆ ಶ್ರದ್ದಾಂಜಲಿ ಕಾರ್ಯಕ್ರಮ ನಡೆಸಲಾಯಿತು. ಜಿಲ್ಲಾ ಕ ಸಾಪ ಅಧ್ಯಕ್ಷ ಎಂ ಪಿ ಶ್ರೀನಾಥ್ ಅವರು ದೀಪ ಪ್ರಜ್ವಲನ ಅಗಲಿದ ಸಾಹಿತಿ ಅವರಿಗೆ ನುಡಿ ನಮನ ಸಲ್ಲಿಸಿದರು. . ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಚಂದ್ರಶೇಖರ್ ಪೇರಾಲು ಮಾತನಾಡಿ ಒಬ್ಬ ಶಿಕ್ಷಕರಾಗಿ ಸಾಹಿತ್ಯದ ಹಲವಾರು ಪ್ರಾಕಾರಗಳಲ್ಲಿ ಕೃತಿ ರಚನೆ ಮಾಡಿ ಗ್ರಾಮೀಣ ಪ್ರದೇಶದಲ್ಲಿ ಅಕ್ಷರ ಕ್ರಾಂತಿಯ ಜೊತೆಗೆ ಸಾಂಸ್ಕೃತಿಕ ಪರಿಸರವನ್ನು ಸೃಷ್ಠಿಸಿದ ಟಿ ಜಿ ಮುಡೂರು ಅವರು ಕನ್ನಡ ಸಾಹಿತ್ಯ ಪರಿಷತ್ ಇದರ ಅಧ್ಯಕ್ಷರಾಗಿ ಸುದೀರ್ಘ ಕಾಲ ಕೆಲಸ ಮಾಡಿ ಸಾಹಿತ್ಯ ಸಂಘಟನೆಯಲ್ಲಿ ಕೂಡಾ ಸೈ ಎನಿಸಿಕೊಂಡವರು. ಇವರ ಅಗಲಿಕೆ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳಾದ ವಿನಯ ಆಚಾರ್ಯ, ಶ್ರೀಮತಿ ರಾಜೇಶ್ವರಿ , ಕೋಶಾಧ್ಯಕ್ಷ ಐತ್ತಪ್ಪ ನಾಯ್ಕ್ , ಬಂಟ್ವಾಳ ಕ ಸಾ ಪ ಅಧ್ಯಕ್ಷ ಶ್ರೀ ವಿಶ್ವನಾಥ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಮಂಗಳೂರು ಅಧ್ಯಕ್ಷ ಮಂಜುನಾಥ್ ರೇವಣಕರ್, ಪುತ್ತೂರ್ ಅಧ್ಯಕ್ಷ ಉಮೇಶ್ ನಾಯಕ್, ಕಡಬ ಅಧ್ಯಕ್ಷ ಶೇಷಪ್ಪ ರೈ, ಮೂಡಬಿದ್ರೆ ಅಧ್ಯಕ್ಷ ವೇಣುಗೋಪಾಲ್ ಶೆಟ್ಟಿ, ಸದಸ್ಯರಾದ ತೇಜಸ್ವಿನಿ ಅಂಬೇಕಲ್ಲು, ಪೂವಪ್ಪ ನೆರಲಕಟ್ಟೆ, ರಾಮಚಂದ್ರ ಪೆಲತಡ್ಕ ಹಾಗೂ ಸಾಹಿತ್ಯ ಅಭಿಮಾನಿಗಳ ಉಪಸ್ತಿರಿದ್ದರು. ಸಭೆಯಲ್ಲಿ ನುಡಿ ನಮನ ಸಲ್ಲಿಸಿ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.