ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಬೆಂಗಳೂರು ಇದರ 24ನೇ ಘಟಿಕೋತ್ಸವದಲ್ಲಿ ಫಾರ್ಮಾ ಡಿ. ಕೋರ್ಸಿನ ಡಾ. ಶ್ವೇತಾ ನೆಟ್ಟಾರು 4 ಚಿನ್ನದ ಪದಕ ಪಡೆದುಕೊಂಡಿದ್ದಾರೆ.
ಪ್ರಥಮ ಫಾರ್ಮಾ ಡಿ, ತೃತೀಯ, ಚತುರ್ಥ ಮತ್ತು ಕೋರ್ಸಿನಾದ್ಯಂತ ಮಾಡಿದ ಸಾಧನೆ ಸೇರಿದಂತೆ ಒಟ್ಟು 4 ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದಾರೆ.
ಬೆಳ್ಳಾರೆ ಗ್ರಾಮದ ನೆಟ್ಟಾರು ಸಿವಿಲ್ ಇಂಜಿನಿಯರಿಂಗ್ ಹಾಗೂ ಪ್ರಗತಿಪರ ಕೃಷಿಕ ವಿಶ್ವೇಶ್ವರ ಭಟ್ ಮತ್ತು ಶ್ರೀಮತಿ ನಿಶಾರಾಣಿ ದಂಪತಿಗಳ ಪುತ್ರಿಯಾಗಿರುವ ಡಾ. ಶ್ವೇತಾ ನೆಟ್ಟಾರುರವರು ಬೆಳ್ಳಾರೆ ಸ.ಹಿ.ಪ್ರಾ. ಶಾಲೆಯಲ್ಲಿ ಪ್ರಾಥಮಿಕ, ಬಾಳಿಲ ವಿದ್ಯಾಬೋಧಿನೀ ಪ್ರೌಢ ಶಾಲೆಯಲ್ಲಿ ಹೈಸ್ಕೂಲ್ ಹಾಗೂ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪಿ.ಯು.ಸಿ. ವಿದ್ಯಾಭ್ಯಾಸ ಪಡೆದಿದ್ದರು. ಮಂಗಳೂರಿನ ಶ್ರೀನಿವಾಸ ಕಾಲೇಜ್ ಆಫ್ ಫಾರ್ಮಸಿಯಲ್ಲಿ ಈ ವಿಶೇಷ ಸಾಧನೆಯನ್ನು ಮಾಡಿದ ಡಾ. ಶ್ವೇತಾ ಪ್ರಸ್ತುತ ಮಂಗಳೂರಿನ ವಳಚ್ಚಿಳ್ ನಲ್ಲಿರುವ ಶ್ರೀನಿವಾಸ ಕಾಲೇಜ್ ಆಫ್ ಫಾರ್ಮಸಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಹಿರಿಯ ಸಹೋದರಿ ಶ್ರೀಮತಿ ಸೀತಾಲಕ್ಷ್ಮೀ ಸುಪ್ರಸಾದ ಕೃಷ್ಣ ಶರ್ಮರು ಮಂಗಳೂರಿನ ಇನ್ಫೋಸಿಸ್ ನಲ್ಲಿ ಇಂಜಿನಿಯರಿಂಗ್ ಆಗಿ ಸೇವೆ ಸಲ್ಲಿಸಿದರೆ ಸಹೋದರಿ ಕು. ಸುಚೇತಾ ನೆಟ್ಟಾರು ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾರೆ.