ಐವರ್ನಾಡು ಗ್ರಾಮ ಪಂಚಾಯತ್, ಮಂಜುಶ್ರೀ ಗೆಳೆಯರ ಬಳಗ ಪಾಲೆಪ್ಪಾಡಿ ವತಿಯಿಂದ ಬೇಂಗಮಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮವು ಮೇ.01 ರಂದು ನಡೆಯಿತು.
ಬೆಳಿಗ್ಗೆ ಬೇಂಗಮಲೆ ರಕ್ಷಿತಾರಣ್ಯದ ರಸ್ತೆ ಬದಿಯಲ್ಲಿರುವ ಪ್ಲಾಸ್ಟಿಕ್,ಕಸ,ಬಾಟ್ಲಿಗಳನ್ನು ಹೆಕ್ಕಿ ಶುಚಿಗೊಳಿಸಲಾಯಿತು.
ಗ್ರಾಮ ಪಂಚಾಯತ್ ತ್ಯಾಜ್ಯ ವಿಲೇವಾರಿ ವಾಹನಕ್ಕೆ ಕಸಗಳನ್ನು ಹಾಕಲಾಯಿತು.
ಬೇಂಗಮಲೆ ರಸ್ತೆ ಬದಿ ಪದೇ ಪದೇ ಜನರು ಕಸಗಳನ್ನು ,ತ್ಯಾಜ್ಯಗಳನ್ನು ,ಬಾಟ್ಲಿಗಳನ್ನು ತಂದು ಹಾಕುತ್ತಿದ್ದು ಇದರಿಂದ ತುಂಬಾ ಸಮಸ್ಯೆಯಾಗುತ್ತಿದೆ.
ತ್ಯಾಜ್ಯ ಎಸೆದ ಕೆಲವರಿಗೆ ಪಂಚಾಯತ್ ವತಿಯಿಂದ ದಂಡವನ್ನು ಕೂಡ ಹಾಕಲಾಗಿದೆ.
ಆದರೂ ಈಗಲೂ ಕೆಲವು ಕಿಡಿಗೇಡಿಗಳು ತ್ಯಾಜ್ಯ ಎಸೆಯುತ್ತಿರುವುದು ಕಂಡು ಬರುತ್ತಿದ್ದು ಸಮಸ್ಯೆಯಾಗಿ ಪರಿಣಮಿಸಿದೆ.
ಗ್ರಾಮ ಪಂಚಾಯತ್ ವತಿಯಿಂದ ಪ್ರತೀ ತಿಂಗಳ ಮೊದಲ ಆದಿತ್ಯವಾರದಂದು ಸ್ವಚ್ಛತಾ ಕಾರ್ಯಕ್ರಮ ನಡೆಯುತ್ತಿದ್ದು ಸಂಘ,ಸಂಸ್ಥೆಗಳು ಸ್ವಚ್ಚತಾ ಕಾರ್ಯಕ್ರಮದಲ್ಲಿ ಕೈ ಜೋಡಿಸುತ್ತಿದೆ.ಪದಾಧಿಕಾರಿಗಳು ಸಹಕರಿಸುತ್ತಿದ್ದಾರೆ.
ಸ್ವಚ್ಛತಾ ಕಾರ್ಯಕ್ರಮದಲ್ಲಿ ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ, ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಕೀಲಾಡಿ, ಉಪಾಧ್ಯಕ್ಷೆ ಶ್ರೀಮತಿ ಸುಜಾತ ಪವಿತ್ರಮಜಲು, ಪಿ.ಡಿ.ಒ ಶ್ಯಾಮ್ ಪ್ರಸಾದ್, ಗ್ರಾಮ ಪಂಚಾಯತ್ ಸದಸ್ಯರು, ಮಂಜುಶ್ರೀ ಗೆಳೆಯರ ಬಳಗದ ಅಧ್ಯಕ್ಷ ನಟರಾಜ್ ಸಿ.ಕೂಪ್ ಹಾಗೂ ಪದಾಧಿಕಾರಿಗಳು, ಸದಸ್ಯರು ,ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗದವರು ,ಗ್ರಾಮಸ್ಥರು ಉಪಸ್ಥಿತರಿದ್ದರು.